ಓಟ
ಓಟವು ಮಾನವರು ಮತ್ತು ಇತರ ಪ್ರಾಣಿಗಳಿಗೆ ಕಾಲಿನಿಂದ ವೇಗವಾಗಿ ಚಲಿಸಲು ಅನುಮತಿ ನೀಡುವ ಭೂಮಿಯ ಮೇಲಿನ ಚಲನೆಯ ವಿಧಾನ. ಓಟವು ನಡಿಗೆಯ ಒಂದು ಪ್ರಕಾರವಾಗಿದೆ. ಎಲ್ಲ ಪಾದಗಳು ನೆಲದ ಮೇಲಿರುವ (ಆದರೆ ಇದಕ್ಕೆ ಅಪವಾದಗಳಿವೆ) ವಾಯವೀಯ ಹಂತವಿರುವುದು ಇದರ ಗುಣಲಕ್ಷಣವಾಗಿದೆ.[೧] ಇದು ನಡಿಗೆಯಿಂದ ಭಿನ್ನವಾಗಿದೆ, ಏಕೆಂದರೆ ನಡಿಗೆಯಲ್ಲಿ ಒಂದು ಪಾದವು ಯಾವಾಗಲೂ ನೆಲದ ಸಂಪರ್ಕದಲ್ಲಿರುತ್ತದೆ, ಕಾಲುಗಳನ್ನು ಬಹುತೇಕವಾಗಿ ನೇರವಾಗಿ ಇಡಲಾಗುತ್ತದೆ ಮತ್ತು ಗುರುತ್ವದ ಕೇಂದ್ರವು ಕಾಲು ಅಥವಾ ಕಾಲುಗಳ ನಿಲುವಿನ ಮೇಲೆ ತಲೆಕೆಳಗಾದ ಲೋಲಕದ ಶೈಲಿಯಲ್ಲಿ ಆವರಿಸುತ್ತದೆ. ಲಂಘಕ ದ್ರವ್ಯರಾಶಿ ಯಂತ್ರಶಾಸ್ತ್ರದ ದೃಷ್ಟಿಕೋನದಿಂದ ಓಟದಲ್ಲಿರುವ ಕಾಯದ ವಿಶಿಷ್ಟ ಲಕ್ಷಣವೆಂದರೆ ಒಂದು ದಾಪುಗಾಲಿನಲ್ಲಿನ ಚಲನ ಮತ್ತು ಅಂತಸ್ಥ ಶಕ್ತಿಯಲ್ಲಿನ ಬದಲಾವಣೆಗಳು ಏಕಕಾಲದಲ್ಲಿ ಉಂಟಾಗುತ್ತವೆ, ಮತ್ತು ಶಕ್ತಿಯ ಶೇಖರಣೆಯು ಲಂಘಕದಂತಿರುವ ಸ್ನಾಯುರಜ್ಜುಗಳು ಮತ್ತು ನಿಷ್ಕ್ರಿಯ ಸ್ನಾಯು ಸ್ಥಿತಿಸ್ಥಾಪಕತ್ವದಿಂದ ನೆರವೇರುತ್ತದೆ. ಓಟ ಪದವು ಜಾಗಿಂಗ್‍ನಿಂದ ಪೂರ್ಣವೇಗದ ಓಟದವರೆಗೆ ವ್ಯಾಪಿಸುವ ವೇಗಗಳ ವೈವಿಧ್ಯದಲ್ಲಿನ ಯಾವುದನ್ನಾದರೂ ಸೂಚಿಸಬಹುದು.
ಮಾನವಕುಲದ ಪೂರ್ವಜರು ಬಹಳ ದೂರ ಓಡುವ ಸಾಮರ್ಥ್ಯವನ್ನು ಸುಮಾರು ೨.೬ ಮಿಲಿಯ ವರ್ಷಗಳ ಹಿಂದೆ, ಬಹುಶಃ ಪ್ರಾಣಿಗಳನ್ನು ಬೇಟೆಯಾಡುವ ಸಲುವಾಗಿ ಬೆಳೆಸಿಕೊಂಡರು ಎಂದು ಊಹಿಸಲಾಗಿದೆ. ವಿವಿಧ ಪ್ರದೇಶಗಳಲ್ಲಿನ ಧಾರ್ಮಿಕ ಉತ್ಸವಗಳಿಂದ ಸ್ಪರ್ಧಾತ್ಮಕ ಓಟವು ಬೆಳೆಯಿತು. ಸ್ಪರ್ಧಾತ್ಮಕ ಓಟದ ದಾಖಲೆಗಳು ಆಯರ್ಲಂಡ್‍ನಲ್ಲಿ ಕ್ರಿ.ಪೂ. ೧೮೨೯ರಲ್ಲಿ ನಡೆದ ಟೇಲ್‌ಟೀನ್ ಕ್ರೀಡಾಕೂಟದಷ್ಟು ಹಿಂದಿನ ಕಾಲಮಾನದ್ದೆಂದು ನಿರ್ಧರಿಸಲಾಗಿದೆ. ಮೊದಲ ದಾಖಲಿತ ಒಲಿಂಪಿಕ್ ಕ್ರೀಡಾಕೂಟವು ಕ್ರಿ.ಪೂ. ೭೭೬ರಲ್ಲಿ ನಡೆಯಿತು. ಓಟವನ್ನು ವಿಶ್ವದ ಅತ್ಯಂತ ಸುಲಭಸಾಧ್ಯ ಕ್ರೀಡೆ ಎಂದು ವರ್ಣಿಸಲಾಗಿದೆ.
ಕೆಳಗಿನ ಅವಯವಕ್ಕೆ ಸಂಬಂಧಿಸಿದಂತೆ ಓಟದ ರೀತಿಯನ್ನು ಎರಡು ಹಂತಗಳಾಗಿ ವಿಭಜಿಸಬಹುದು: ನಿಲುವು ಮತ್ತು ತೂಗಾಟ. ಓಟದ ರೀತಿಯ ನಿರಂತರ ಸ್ವರೂಪದ ಕಾರಣ, ಯಾವುದೇ ನಿರ್ದಿಷ್ಟ ಬಿಂದುವನ್ನು ಆರಂಭ ಎಂದು ಊಹಿಸಲಾಗುವುದಿಲ್ಲ. ಮುಂದೆ ಬಾಗುವುದರಿಂದ ಓಟಗಾರನ ದ್ರವ್ಯರಾಶಿಯ ಕೇಂದ್ರವು ಪಾದದ ಮುಂದಿನ ಭಾಗದಲ್ಲಿರುತ್ತದೆ. ಇದರಿಂದ ಹಿಮ್ಮಡದ ಮೇಲೆ ಪಾದವನ್ನು ಕೆಳಗಿಳಿಸುವುದು ತಪ್ಪುತ್ತದೆ ಮತ್ತು ಪಾದದ ಲಂಘಕ ಕಾರ್ಯರೀತಿಯ ಬಳಕೆಯನ್ನು ಸುಗಮವಾಗಿಸುತ್ತದೆ. ಇದು ಓಟಗಾರನಿಗೆ ಪಾದವನ್ನು ದ್ರವ್ಯರಾಶಿಯ ಕೇಂದ್ರದ ಮುಂದೆ ಇಳಿಸುವುದನ್ನು ಮತ್ತು ಪರಿಣಾಮಕ ತಡೆಹಾಕುವ ಪ್ರಭಾವವನ್ನು ತಪ್ಪಿಸಲು ಕೂಡ ಸುಲಭವಾಗಿಸುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ "Gait selection in the ostrich: mechanical and metabolic characteristics of walking and running with and without an aerial phase". Proceedings of the Royal Society of London B: Biological Sciences. 271 (1543): 1091–1099. 22 May 2004. doi:10.1098/rspb.2004.2702. PMID 15293864 – via rspb.royalsocietypublishing.org.