ಕೇಶಿರಾಜ
ಹೊಯ್ಸಳ ಸಾಮ್ರಾಜ್ಯದ ಪ್ರಸಿದ್ಧ ಕನ್ನಡ ಕವಿಗಳು ಮತ್ತು ಬರಹಗಾರರು (1100-1343 CE) | |
ನಾಗಚಂದ್ರ | 1105 |
ಕ೦ಟಿ | 1108 |
ರಾಜದಿತ್ಯ | 12th. c |
ಹರಿ ಹರ | 1160–1200 |
ಉದಯದಿತ್ಯ | 1150 |
ವ್ರಿತ್ತ ವಿಲಾಸ | 1160 |
ಕೆರೆಯ ಪದ್ಮರಸ | 1165 |
ನೆಮಿಚ೦ದ್ರ | 1170 |
ಸುಮನೊಬನ | 1175 |
ರುದ್ರಭಟ್ಟ | 1180 |
ಅಗ್ಗಲ | 1189 |
ಪಲ್ಕುರಿಕಿ ಸೊಮನಾಥ | 1195 |
ಸುಜನೊತ್ತಮ್ಸ(ಬೊಪ್ಪಣ್ಣ) | 1180 |
ಕವಿ ಕಮ | 12th c. |
ದೆವಕವಿ | 1200 |
ರಾಘವ೦ಕ | 1200–1225 |
ಭ೦ದುವರ್ಮ | 1200 |
ಬಾಲಚ೦ದ್ರ ಕವಿ | 1204 |
ಪರ್ಸ್ವ ಪ೦ಡಿತ | 1205 |
ಮಘನ೦ದ್ಯಚರ್ಯ | 1209 |
ಜನ್ನ | 1209–1230 |
ಪುಲಿಗೆರೆ ಸೋಮನಾಥ | 13th c. |
ಹಸ್ತಿಮಲ್ಲ | 13th c. |
ಚ೦ದ್ರಮ | 13th c. |
ಸೋಮರಜ | 1222 |
ಗುಣವರ್ಮ II | 1235 |
ಪೊಲಲ್ವದ೦ದನಾಥ | 1224 |
ಆ೦ಡಯ್ಯ | 1217–1235 |
ಸಿಸುಮಯನ | 1232 |
ಮಲ್ಲಿಕಾರ್ಜುನ | 1245 |
ನರಹರಿ ತೀರ್ಥ | 1281 |
ಕುಮಾರ ಪದ್ಮರಸ | 13th c. |
ಮಹಾಬಲ ಕವಿ | 1254 |
ಕೇಶಿರಾಜ | 1260 |
ಕುಮುದೆ೦ದು | 1275 |
ನಚಿರಾಜ | 1300 |
ರಟ್ಟ ಕವಿ | 1300 |
ನಾಗರಾಜ | 1331 |
ಸೀನು ಯಾದವ ಆಳ್ವಿಕೆಯ ಪ್ರಸಿದ್ಧ ಕನ್ನಡ ಕವಿಗಳು ಮತ್ತು ಬರಹಗಾರರು | |
ಕಮಲಭವ | 1180 |
ಅಚ್ಛಣ್ಣ | 1198 |
ಆಮುಗಿದೇವ | 1220 |
ಚೌ೦ಡರಸ | 1300 |
ಕೇಶಿರಾಜನ ಕಾಲ ಸುಮಾರು ಕ್ರಿ.ಶ.೧೨೬೦.[೧] ಈತನು ಜನ್ನನ ಸೋದರಳಿಯ.ಹಳಗನ್ನಡ ವ್ಯಾಕರಣವನ್ನು ವಿವರಿಸುವ ಶಬ್ದಮಣಿದರ್ಪಣ ಈತನ ಪ್ರಖ್ಯಾತ ಕೃತಿ.
ಕೇಶಿರಾಜ | |
---|---|
ಜನನ | ೧೩ ನೇ ಶತಮಾನ ಸಿಇ |
ಮರಣ | ೧೩ನೆ ಅಥವಾ ೧೪ನೆ ಶತಮಾನ ಸಿಇ |
ವೃತ್ತಿ(ಗಳು) | ಕನ್ನಡ,ವ್ಯಾಕರಣ, ಕವಿ ಮತ್ತು ಬರಹಗಾರ |
ಇತರ ಕೆಲಸಗಳು | ಶಬ್ದಮಣಿದರ್ಪಣ |
ಪೋಷಕ |
|
ಕೇಶಿರಾಜ
ಬದಲಾಯಿಸಿಕೇಶಿರಾಜನ ತಂದೆ ಯೋಗಿಪ್ರವರನಾದ 'ಮಲ್ಲಿಕಾರ್ಜುನ', ತಾಯಿಯ ತಂದೆ ಕವಿಯೂ ಯಾದವಕಟಕಾಚಾರ್ಯನೂ ಆಗಿದ್ದ "ಸುಮನೋಬಾಣ" ಎಂದು ಶಬ್ದಮಣಿದರ್ಪಣದ ಆದಿಯಲ್ಲಿ ಕೇಶಿರಾಜನೇ ಹೇಳಿದ್ದಾನೆ. ಸು. ೧೫೫೫-೧೬೧೭; ಸಂಸ್ಕೃತ ಕಾವ್ಯಮೀಮಾಂಸೆಯ ಪರಿಚಯವನ್ನು ಹಿಂದಿಯಲ್ಲಿ ಮೊದಲಿಗೆ ಮಾಡಿಕೊಟ್ಟ ವಿದ್ವಾಂಸ; ಕವಿ. ಸಂತಕವಿ ತುಳಸೀದಾಸನ ಸಮಕಾಲೀನ. ಸಂಸ್ಕೃತ ಪಾಂಡಿತ್ಯಕ್ಕೆ ಹೆಸರಾಗಿದ್ದ ಸನಾಢ್ಯ ಬ್ರಾಹ್ಮಣ ಕುಲದಲ್ಲಿ ಈತ ಹುಟ್ಟಿದ. ವಾಸವಾಗಿದ್ದುದು ತುಂಗರಾಯ್ ಬಳಿ ಚೇತವಾ ನದಿಯ ದಡದಲ್ಲಿದ್ದ ಓಡಾಛಾ ನಗರದಲ್ಲಿ. ಮಹಾರಾಜ ಮಧುಕರಷಾಹನ ಪುತ್ರ ಮಹಾರಾಜ ಇಂದ್ರಜೀತಸಿಂಹ ಈತನ ಆಶ್ರಯದಾತ. ಈತನ ಹಿರಿಯರು ತಲೆಮಾರುಗಳಿಂದ ಆಸ್ಥಾನಪಂಡಿತರಾಗಿದ್ದವರು. ಹೀಗಾಗಿ ರಾಜನೀತಿ ಮತ್ತು ಆಸ್ಥಾನ ಕಾರ್ಯಚಟುವಟಿಕೆಗಳ ಅರಿವು ಈತನಿಗೆ ಅನುವಂಶಿಕವಾಗಿ ಲಭ್ಯವಾಗಿತ್ತು. ಕೇಶವದಾಸನನ್ನು ಹಿಂದಿಯಲ್ಲಿ ರೀತಿ ಸಂಪ್ರದಾಯದ ಪ್ರವರ್ತಕನೆಂದು ಪರಿಗಣಿಸಲಾಗಿದೆ. [೨] ಸುಮನೋಬಾಣಾನು ಇಮ್ಮಡಿ ನರಸಿಂಹನ ಆಸ್ಥಾನದಲ್ಲಿದ್ದರು.(೧೨೩೦) ಅವನ ಅನಂತನಾಥಪುರಾಣದಲ್ಲಿ ಅದರ ಸೂಚನೆಯಿದೆ.ಕೇಶಿರಾಜ ಚೋಳರಾಜನಾದ ಇಮ್ಮಡಿ ನರಸಿಂಹನ ಹಾಗೂ ಅವನ ಮಗ ವೀರ ಸೋಮೇಶ್ವರನ ಆಳಿಕೆಯಲ್ಲಿದ್ದನೆಂದು ವಿದ್ವಾಂಸರು ಹೇಳುತ್ತಾರೆ. ಇಮ್ಮಡಿ ನರಸಿಂಹನ ಆಳ್ವಿಕೆಯಕಾಲ ೧೨೨೦-೩೮. ಅಲ್ಲದೇ ಅವನ ಮಗನಾದ ಸೋಮೇಶ್ವರನ ಕಾಲ ೧೨೩೩-೬೭. ಈ ಕಾಲಘಟ್ಟದಲ್ಲಿಯೇ ಕೇಶಿರಾಜನ ಶಬ್ದಮಣಿದರ್ಪಣ ರಚನೆಯಾದದ್ದು.[೩]
ಇವರ ಕೃತಿಗಳು
ಬದಲಾಯಿಸಿಪ್ರಬೋಧಚಂದ್ರ, ಚೋಳಪಾಲಕ ಚರಿತ, ಕಿರಾತ, ಸುಭದ್ರಾ ಹರಣ, ಶ್ರೀ ಚಿತ್ರಮಾಲೆ. ಆದರೆ ಇವು ಯಾವುವೂ ಪ್ರಸ್ತುತ ಲಭ್ಯವಿಲ್ಲವಾಗಿವೆ.[೪] ರಸಿಕಪ್ರಿಯ (೧೫೯೧); ಕವಿಪ್ರಿಯ(೧೬೦೧); ರಾಮಚಂದ್ರಿಕ (೧೬೦೧); ರತನಭಾವನಿ(೧೬೦೧); ವೀರಸಿಂಹ ದೇವಚರಿತ(೧೬೦೭); ಜಹಾಂಗೀರ ಜಸಚಂದ್ರಿಕ (೧೬೧೨); ಮತ್ತು ವಿಜ್ಞಾನ ಗೀತ (೧೬೦೧)- ಈ ೭ಕೃತಿಗಳು ಕೇಶವದಾಸನ ರಚನೆಗಳೆಂದು ಪಂಡಿತರು ತೀರ್ಮಾನಿಸಿದ್ದಾರೆ. ನಕಸಿಕವನ್ನು ಈತನ ಹೆಸರಿಗೇ ಆರೋಪಿಸಿದ್ದರೂ ಅದು ಈತನ ಅಣ್ಣ ಬಲಭದ್ರನ ರಚನೆಯೆಂದು ಬಹುಮಂದಿ ವಿದ್ವಾಂಸರ ಅಭಿಪ್ರಾಯ. ಛಂದಮಾಲಾ ಎಂಬ ಕೃತಿಯೂ ಈತನ ಹೆಸರಿನಲ್ಲಿದೆ. ರಸಿಕಪ್ರಿಯಾ ಕಾವ್ಯಮೀಮಾಂಸೆಗೆ ಸಂಬಂಧಿಸಿದ ಒಂದು ಪ್ರೌಢ ಗ್ರಂಥ. ಇದರಲ್ಲಿ ಕಾವ್ಯಪರಂಪರೆಗೆ ಅನುಸಾರವಾಗಿ ರಸ, ವೃತ್ತಿ, ಕಾವ್ಯದೋಷ ಮುಂತಾದುವುಗಳ ವರ್ಣನೆ ಮತ್ತು ಉದಾಹರಣೆಗಳು ಕಾಣದೊರೆಯುತ್ತವೆ. ಭರತನ ನಾಟ್ಯಶಾಸ್ತ್ರ, ವಾತ್ಸ್ಯಾಯನನ ಕಾಮಸೂತ್ರ ಮತ್ತು ರುದ್ರಭಟ್ಟನ ಶೃಂಗಾರತಿಲಕ ಕೃತಿಗಳ ಆಧಾರದ ಮೇಲೆ ಈ ಕೃತಿ ರಚಿತವಾಗಿದೆ. ಶೃಂಗಾರರಸವನ್ನು ಕುರಿತ ವಿವೇಚನೆ ಇಲ್ಲಿ ಗಮನಾರ್ಹವಾಗಿದೆ. ಈ ಬಗೆಗಿನ ಲಕ್ಷ್ಯಪದ್ಯಗಳಲ್ಲಿ ಕಾಣುವ ಕೃಷ್ಣನ ಚಿತ್ರವೂ ಬೇರೆಯ ಬಗೆಯದು. ಇಲ್ಲಿಯ ಕೃಷ್ಣ ಒಬ್ಬ ರಸಿಕ. ಹೀಗಾಗಿ ಈ ಕೃಷ್ಣ ಭಕ್ತಕವಿಗಳ ಕೃಷ್ಣನಿಗಿಂತ ಭಿನ್ನನಾಗಿದ್ದಾನೆ. ಇತರ ರಸಗಳ ಸಾಮಾನ್ಯ ನಿರೂಪಣೆಯೂ ಇದರಲ್ಲಿದೆ. ರಸದ ಅಂಗವಾಗಿಯೇ ನಾಯಿಕಾಭೇದಗಳನ್ನು ಕುರಿತು ಚರ್ಚಿಸಲಾಗಿದೆ. ಒಟ್ಟಿನಲ್ಲಿ ವಿಷಯಗಳ ಸಾಂಗೋಪಾಂಗ ವಿವೇಚನೆ ಇಲ್ಲಿ ಕಾಣುವುದಿಲ್ಲ. ಭಾಮಹ, ಉದ್ಭಟ ಮೊದಲಾದ ಕಾವ್ಯಮೀಮಾಂಸಕರನ್ನು ಅನುಸರಿಸಿ ಅಲಂಕಾರ ಶಬ್ದವನ್ನು ತುಂಬ ವ್ಯಾಪಕವಾದ ಅರ್ಥದಲ್ಲಿ-ಅಂದರೆ, ರಸ ರೀತಿಗಳನ್ನು ಒಳಗೊಳ್ಳುವಂತೆ ಬಳಸಲಾಗಿದೆ. ಇಲ್ಲಿಯ ಭಾಷೆ ಸರಳವಾಗಿದೆ. ಅಲಂಕಾರಗ್ರಂಥಗಳ ಇತಿಹಾಸದಲ್ಲಿ ಈ ಗ್ರಂಥಕ್ಕೆ ಐತಿಹಾಸಿಕ ಮಹತ್ವ ಮಾತ್ರ ದೊರೆಯಬಹುದಾದರೂ ಕೇಶವದಾಸನ ಕೃತಿಗಳಲ್ಲಿ ಇದಕ್ಕೊಂದು ಸ್ಥಾನವಿದೆ.[೫] ಶಬ್ದಮಣಿದರ್ಪಣವನ್ನು ಜೆ.ಗ್ಯಾರೆಟ್ ಎನ್ನುವವರು ಕ್ರಿ.ಶ. ೧೮೬೮ರಲ್ಲಿ ಮೊದಲ ಬಾರಿಗೆ ಪ್ರಕಟಿಸಿದರು. ಕ್ರಿ.ಶ.೧೮೭೨ರಲ್ಲಿ ರೆವೆರಂಡ್ ಕಿಟ್ಟೆಲ್ ಈ ಗ್ರಂಥವನ್ನು ಪರಿಷ್ಕರಿಸಿ ಪ್ರಕಟಿಸಿದರು. ಕ್ರಿ.ಶ. ೧೯೫೧ರಲ್ಲಿ ಡಿ.ಕೆ.ಭೀಮಸೇನರಾಯರು ಹಾಗು ೧೯೫೮ರಲ್ಲಿ ಡಿ.ಎಲ್.ನರಸಿಂಹಾಚಾರ್ ಅವರು ಪರಿಷ್ಕೃತ ಕೃತಿಗಳನ್ನು ರಚಿಸಿದ್ದಾರೆ.[೬]
ಶಬ್ದಮಣಿದರ್ಪಣ
ಬದಲಾಯಿಸಿ- ಕೇಶಿರಾಜನ "ಶಬ್ದಮಣಿದರ್ಪಣ"ವು ಸಮಗ್ರವೂ ಸ್ವಾರಸ್ಯವೂ ಆದ ಉತ್ತಮ ವ್ಯಾಕರಣ ಗ್ರಂಥ. ಇಡೀ ಕೃತಿ ಕಂದಪದ್ಯಗಳ ರೂಪದಲ್ಲಿದೆ. ಎಂಟು ಅಧ್ಯಾಯಗಳನ್ನು ಒಳಗೊಂಡಿದೆ. ಇಲ್ಲಿ ಅಧ್ಯಾಯಗಳಿಗೆ ಪ್ರಕರಣ ಎನ್ನಲಾಗುತ್ತದೆ. ಕಂದಪದ್ಯಗಳಿಗೆ 'ಸೂತ್ರ'ವೆಂದೂ, ಗದ್ಯರೂಪದ ವಿವರಣೆಗೆ 'ವೃತ್ತಿ'ಯೆಂದೂ, ವ್ಯಾಕರಣದ ಉದಾಹರಣೆಗಳಿಗೆ 'ಪ್ರಯೋಗ'ವೆಂದು ಕರೆದು, ತನ್ನ ಗ್ರಂಥಕ್ಕೆ ೨ನೇ ನಾಗವರ್ಮನ "ಶಬ್ದಸ್ಪೃತಿ ಮತ್ತು ಕಾವ್ಯಾವಲೋಕನ" ಗ್ರಂಥಗಳ 'ಸೂತ್ರ', 'ವೃತ್ತಿ' ಮತ್ತು 'ಪ್ರಯೋಗ'ಗಳನ್ನು ಆಧರಿಸಿದ್ದಾನೆ.
- "ಶಬ್ದಮಣಿದರ್ಪಣ"ವು ೧೩ನೇ ಶತಮಾನಕ್ಕೆ ಮೊದಲು ಹಳಗನ್ನಡ ಭಾಷಾಸ್ಥಿತಿಗತಿಗಳು ಹೇಗಿದ್ದುವೆಂಬುದನ್ನು ಸವಿಸ್ತಾರವಾಗಿ, ಸಪ್ರಮಾಣ ವಿವೇಚನೆಯಿಂದ ವರ್ಣಿಸುತ್ತದೆ. ಇದರೊಳಗೆ ಸಂಧಿ, ನಾಮ, ಸಮಾಸ, ತದ್ಧಿತ, ಆಖ್ಯಾತ, ಧಾತು, ಅಪಭ್ರಂಶ, ಅವ್ಯಯ ಎಂಬ ಹೆಸರಿನ ಎಂಟು ಪ್ರಕರಣಗಳಿವೆ.
- ಪೂರ್ವಕವಿಗಳ ಪ್ರಯೋಗಗಳನ್ನು ಯಥೋಚಿತವಾಗಿ ಉದಾಹರಿಸುವ ಕ್ರಮವನ್ನು ಇಲ್ಲಿ ಅನುಸರಿಸಲಾಗಿದೆ.
ಕವಿಪ್ರಿಯಾ ಕಾವ್ಯಶಿಕ್ಷಾಗ್ರಂಥ
ಬದಲಾಯಿಸಿಕವಿಪ್ರಿಯಾ ಕಾವ್ಯಶಿಕ್ಷಾಗ್ರಂಥ. ಬಹಳ ಹಿಂದೆಯೇ ಸಂಸ್ಕೃತದಲ್ಲಿ ಈ ಬಗೆಯ ಕೃತಿಗಳು ರಚಿತವಾಗಿದ್ದುವು. ಕೇಶವಮಿಶ್ರನ ಅಲಂಕಾರಶೇಖರವನ್ನು ಆಧಾರವಾಗಿಟ್ಟುಕೊಂಡು, ಕಾವ್ಯಕಲ್ಪಲತಾವೃತ್ತಿ ಮತ್ತು ಕಾವ್ಯದರ್ಶ ಕೃತಿಗಳ ಕ್ರಮದಲ್ಲಿ ಈ ಕೃತಿಯನ್ನು ರಚಿಸಲಾಗಿದೆ. ಮಹಾರಾಜ ಇಂದ್ರಜೀತಸಿಂಹನ ಗಣಿಕೆ ರಾಯ್ ಪ್ರವೀನ್ ಎಂಬುವವಳಿಗೆ ಕಾವ್ಯಮೀಮಾಂಸೆಯ ಪರಿಚಯ ಮಾಡಿಕೊಡುವ ಉದ್ದೇಶದಿಂದ ರಚಿಸಿದ ಗ್ರಂಥ ಇದು. ದಂಡಿ, ರುಯ್ಯಕ ಮುಂತಾದ ಅಲಂಕಾರವಾದಿಗಳ ಪಂಥವನ್ನೇ ಅನುಸರಿಸಿ ಕಾವ್ಯಮೀಮಾಂಸೆಯ ವಿವಿಧ ಅಂಗಗಳ-ಕವಿಕರ್ಮ, ಕಾವ್ಯೋದ್ದೇಶ, ಕಾವ್ಯದೋಷಗಳು, ಅಲಂಕಾರ, ರಸ, ವೃತ್ತಿ ಇತ್ಯಾದಿ- ಪರಿಚಯ ಮಾಡಿಕೊಡುವ ಪ್ರಯತ್ನ ಇಲ್ಲಿ ಕಾಣಬರುತ್ತದೆ. ಡಾ.ಬಡಥ್ವಾಲ್ ಈ ಕೃತಿಯ ಬಗ್ಗೆ ಹೇಳುತ್ತಾ ಈತ ಲೇಖನಿಯ ಮೂಲಕ ಮಾತ್ರ ಮಾತನಾಡುವ ಆಚಾರ್ಯನಾಗಿರಲಿಲ್ಲ. ತನ್ನ ಶಿಷ್ಯೆಯಾದ ರಾಯ್‍ಪ್ರವೀನಳನ್ನು ಪ್ರತಿನಿಧಿಯಾಗಿಸಿಕೊಂಡು ಕವಿಸಮುದಾಯಕ್ಕೇ ಕವಿತೆಯ ಬಾಹ್ಯರೂಪವನ್ನು ಕುರಿತ ಶಿಕ್ಷಣ ನೀಡುವ ಹೊಣೆಯನ್ನು ಹೊತ್ತವನಾಗಿದ್ದ-ಎಂದಿದ್ದಾರೆ. ಸುರತಿಮಿಶ್ರ, ಸರದಾರ ಮತ್ತು ನಾರಾಯಣಕವಿಗಳು ಕವಿಪ್ರಿಯಾ ಮತ್ತು ರಸಿಕಪ್ರಿಯಾ ಗ್ರಂಥಗಳಿಗೆ ಟೀಕುಗಳನ್ನು ರಚಿಸಿದ್ದಾರೆ. ಈಚಿನ ವರ್ಷಗಳಲ್ಲಿ ಲಾಲಾಭಗವಾನ್‍ದೀನ್ ಮತ್ತು ಅವರ ಶಿಷ್ಯರು ವಿದ್ವತ್ಪೂರ್ಣ ವ್ಯಾಖ್ಯಾನಗಳನ್ನು ರಚಿಸಿದ್ದಾರೆ. ಈ ಗ್ರಂಥಗಳಲ್ಲಿ ಕಾವ್ಯಮೀಮಾಂಸೆಯ ಎಲ್ಲ ಅಂಗಗಳ ಮೇಲೂ ಬೆಳಕು ಚೆಲ್ಲುವ ಪ್ರಯತ್ನ ಮಾಡಿರುವುದೇ ಕರ್ತೃವಿನ ವೈಶಿಷ್ಟ್ಯ.
ರಾಮಚಂದ್ರಿಕಾ
ಬದಲಾಯಿಸಿರಾಮಚಂದ್ರಿಕಾ ಈತನ ಮಹತ್ವಪೂರ್ಣ ಕೃತಿ. ಮಹರ್ಷಿ ವಾಲ್ಮೀಕಿ ಕನಸಿನಲ್ಲಿ ಕಾಣಿಸಿಕೊಂಡು ವ್ಯರ್ಥಕಾವ್ಯರಚನೆಯಲ್ಲಿ ತೊಡಗುವುದನ್ನು ಬಿಟ್ಟು ಸಾರ್ಥಕ ಕಾವ್ಯರಚನೆಯುತ್ತ ಗಮನ ಹರಿಸಬೇಕೆಂದು ಸೂಚನೆಯಿತ್ತ ಮೇರೆಗೆ ಈ ಕಾವ್ಯವನ್ನು ರಚಿಸಿರುವುದಾಗಿ ಕವಿ ಹೇಳಿಕೊಂಡಿದ್ದಾನೆ. ಈ ಹೇಳಿಕೆ ಈತನ ಕಾವ್ಯಜೀವನದ ಸಂಕ್ಷಿಪ್ತ ವಿಮರ್ಶೆಯೂ ಆಗಿದೆಯೆಂದು ವಿದ್ವಾಂಸರ ಅಭಿಪ್ರಾಯ. ಈ ಕಾವ್ಯದಲ್ಲಿ ಮೂವತ್ತಾರು ಪ್ರಕಾಶ(ಅಧ್ಯಾಯ)ಗಳಿವೆ. ಶ್ರೀಛಂದಸ್ಸಿನಿಂದ ಹಿಡಿದು ಅನೇಕ ವರ್ಣ ಮತ್ತು ಮಾತ್ರಾಛಂದಸ್ಸುಗಳನ್ನು ಬಳಸಿ ಈ ಕಾವ್ಯವನ್ನು ರಚಿಸಲಾಗಿದೆ. ಛಂದಸ್ಸಿನ ಮೇಲಿನ ಪ್ರಭುತ್ವದ ಪ್ರದರ್ಶನಕ್ಕಾಗಿಯೇ ಕರ್ತೃ ಇಲ್ಲಿ ಕಾವ್ಯರಚನೆ ಮಾಡಿರುವಂತೆ ತೋರುತ್ತದೆ. ರಾಮಚಂದ್ರಿಕಾದ ವೈಶಿಷ್ಟ್ಯವೆಂದರೆ ಸ್ವಾರಸ್ಯ ಪೂರ್ಣ ಸಂವಾದಗಳು, ನಾಟಕೀಯ ಪ್ರಸಂಗಗಳು. ಇಂಥ ಪ್ರಸಂಗಗಳಲ್ಲಿ ಸರಸ ಸೂಕ್ತಿಗಳನ್ನು ತೇಲಿಬಿಡುವುದೂ ಉಂಟು. ಕವಿಯ ಪ್ರತ್ಯುತ್ಪನ್ನಮತಿಗೂ ಇವು ನಿದರ್ಶನಗಳಾಗಿವೆ. ಸುಮತಿ-ವಿಮತಿ, ರಾವಣ-ಬಾಣಾಸುರ, ಶ್ರೀರಾಮ-ಪರಶುರಾಮ, ರಾವಣ-ಅಂಗದ ಮೊದಲಾದವರ ಸಂವಾದಗಳು ತುಂಬ ರಮಣೀಯವಾಗಿವೆ. ಆದರೂ ಇವನ್ನು ಎಲ್ಲಿಂದಲೋ ತಂದು ಜೋಡಿಸಿದಂತಿದೆಯೇ ಹೊರತು ಸಹಜವಾಗಿ ಮೂಡಿಬಂದಂತಿಲ್ಲ. ಆಶ್ಚರ್ಯದ ಸಂಗತಿಯೆಂದರೆ ರಾಮಜನ್ಮ ಮೊದಲಾದ ವಿವರಗಳೆಲ್ಲ ತುಂಬ ಸಂಕ್ಷೇಪವಾಗಿ ಬಂದಿವೆ. ರಾಮನಿಗೆ ವನವಾಸವನ್ನು ವಿಧಿಸುವ ದಶರಥ-ಕೈಕೇಯಿ ಸಂವಾದವನ್ನು ಏಳು ಪಂಕ್ತಿಗಳಲ್ಲಿ ಮುಗಿಸಲಾಗಿದೆ. ಆದರೆ, ಧನುರ್ಯಜ್ಞದ ವರ್ಣನೆ ಸಾಂಗೋಪಾಂಗವಾಗಿ ಬಂದಿದೆ. ಸ್ವಯಂವರ ಸಭೆಗೆ ಬಂದಿದ್ದ ರಾಜರ ವರ್ಣನೆಯನ್ನು ಮಿತಿಮೀರಿ ಬೆಳೆಸಲಾಗಿದೆ. ಆಸ್ಥಾನಜೀವನದ ನಿಕಟ ಪರಿಚಯವಿದ್ದುದೇ ಈ ವರ್ಣನೆಯ ವಿಸ್ತಾರಕ್ಕೂ ಸಹಜತೆಗೂ ಕಾರಣವಾಗಿರಬಹುದು. ಪೇಟೆ, ರಾಜಾಸ್ಥಾನದ ವೈಭವ, ನಗರಾಲಂಕರಣ, ವಿಶೇಷ ಸಂದರ್ಭಗಳಲ್ಲಿನ ಗಡಿಬಿಡಿ-ಮುಂತಾದವುಗಳ ಸಜೀವ ವರ್ಣನೆ ಇಲ್ಲಿ ಕಾಣಸಿಗುತ್ತದೆ. ಋತುವರ್ಣನೆ ಮತ್ತು ಪಾತ್ರಗಳ ನಖಶಿಖಾಂತ ವರ್ಣನೆಗಳೂ ಚೆನ್ನಾಗಿವೆ. ಆದರೆ, ಪಾತ್ರಗಳ ಪರಿಪೂರ್ಣ ಚಿತ್ರವನ್ನು ಮನಸ್ಸಿನಲ್ಲಿ ಮೂಡಿಸಲು ನೆರವಾಗುವಂಥ ಅನೇಕ ಪ್ರಸಂಗಗಳನ್ನು ನಿರ್ದಾಕ್ಷೀಣ್ಯವಾಗಿ ಕೈಬಿಡಲಾಗಿದೆ. ಅಲಂಕಾರಕೌಶಲ ಮತ್ತು ವಾಗ್ವಿಲಾಸಪ್ರದರ್ಶನಕ್ಕೆ ಅವಕಾಶಮಾಡಿಕೊಡುವಂಥ ಪ್ರಸಂಗಗಳ ಬಗ್ಗೆ ಕವಿ ವಿಶೇಷ ಆಸಕ್ತಿ ತೋರಿದ್ದಾನೆ. ಉದಾಹರಣೆಗೆ, ಸೀತೆಯ ಮುಖವನ್ನು ವರ್ಣಿಸಲು ಬಳಸಿರುವ ದಂಡಕ ಶ್ಲೇಷಾರ್ಥಗಳಿಂದ ಕೂಡಿದ್ದು, ದುಷ್ಕರವಾಗಿ ಪರಿಣಮಿಸಿದೆ. ಇದೇ ರೀತಿ ವಿವಿದಾರ್ಥಗಳನ್ನು ಕೊಡುವಂಥ ಅನೇಕ ಪದ್ಯಗಳನ್ನು ಕವಿ ಹೆಣೆದಿದ್ದಾನೆ. ಹೀಗಾಗಿ, ಕಠಿನಕಾವ್ಯಪ್ರೇತ ಎಂಬ ಪ್ರಥೆಗೂ ಕವಿ ಗುರಿಯಾಗಿದ್ದಾನೆ. ಈ ಕೃತಿಯ ರಚನೆಯ ಮೇಲೆ ಅನರ್ಘರಾಘವ, ಪ್ರಸನ್ನರಾಘವ, ಹನುಮನ್ನಾಟಕ ಮತ್ತು ನೈಷಧ ಗ್ರಂಥಗಳ ಪ್ರಭಾವ ಬಿದ್ದಿರುವುದನ್ನು ಕಾಣಬಹುದು. ಸಂಸ್ಕೃತ ಕಾವ್ಯಗಳ ಅನೇಕ ಪ್ರಸಿದ್ಧ ಸೂಕ್ತಿಗಳನ್ನು ಭಾಷಾಂತರಿಸಿ ಅಲ್ಲಲ್ಲಿ ಬಳಸಿಕೊಳ್ಳಲಾಗಿದೆ. ತುಳಸೀದಾಸನಂತೆ ಈತ ಭಕ್ತಕವಿಯಲ್ಲ. ಇವನಲ್ಲಿ ಕಾಣುವುದು ಕೇವಲ ಪಾಂಡಿತ್ಯ ಪ್ರದರ್ಶನ, ಹೀಗಾಗಿ, ರಾಮಕಥೆಯಂಥ ವಸ್ತುವನ್ನು ಆಯ್ದುಕೊಂಡರೂ ಅದು ಪಾಂಡಿತ್ಯದ ಪ್ರದರ್ಶನ ರಂಗವಾಗಿ ಪರಿಣಮಿಸಿದೆ. ಆದ್ದರಿಂದಲೇ ಇದು ಮಹಾಕಾವ್ಯವಾಗದೆ ಪಂಡಿತರಿಗೆ ಮಾತ್ರ ಪ್ರಿಯವಾದ ಗ್ರಂಥವಾಗಿದೆ.[೭]
ರತನಬಾವನೀ ಮಧುಕರಶಾಹನ ಪುತ್ರ ತರನಸೇನನನ್ನು ಕುರಿತ ಪ್ರಶಂಸಾತ್ಮಕ ಕಾವ್ಯ. ಇದೇ ಬಗೆಯ ಮತ್ತೆರಡು ಪ್ರಶಂಸಾತ್ಮಕ ಕಾವ್ಯಗಳೆಂದರೆ ವೀರಸಿಂಹದೇವಚರಿತ ಮತ್ತು ಜಹಾಂಗೀರ ಜಸಚಂದ್ರಿಕಾ. ಮೊದಲನೆಯದರಲ್ಲಿ ಇಂದ್ರಜೀತಸಿಂಹನೂ ಎರಡನೆಯದರಲ್ಲಿ ಜಹಾಂಗೀರನೂ ಕೀರ್ತಿತರಾಗಿದ್ದಾರೆ.
ಉಲ್ಲೇಖ
ಬದಲಾಯಿಸಿ- ↑ http://www.sobagu.in/ಕೇಶಿರಾಜ/
- ↑ "Chapter 6: Chalukyas of Badami" (PDF). Maharashtra State Gazetteer. Archived from the original (PDF) on 1 March 2011.
- ↑ https://en.unionpedia.org/i/Kesiraja
- ↑ "ಆರ್ಕೈವ್ ನಕಲು". Archived from the original on 2016-03-06. Retrieved 2015-12-25.
- ↑ https://archive.org/details/abdamaidarpaa00kirjuoft
- ↑ https://play.google.com/store/books/details/KANNADA_SHABDAMANIDARPANA_SANGRAHA?id=HnaYAwAAQBAJ&hl=en_IN
- ↑ "ಆರ್ಕೈವ್ ನಕಲು". Archived from the original on 2020-01-11. Retrieved 2020-01-11.