ತಾಳ್ಮೆಯು (ಸಹನೆ, ಸೈರಣೆ) ಕಷ್ಟಕರ ಪ್ರಸಂಗಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ, ಉದಾಹರಣೆಗೆ ವಿಳಂಬದ ಸಂದರ್ಭದಲ್ಲೂ ದೃಢನಿಷ್ಠೆ; ಕೋಪ/ಕಿರಿಕಿರಿಯ ಮೂಲಕ ಪ್ರತಿಕ್ರಿಯಿಸದೆ ಪ್ರಚೋದನೆಯನ್ನು ಸಹಿಸಿಕೊಳ್ಳುವುದು; ಅಥವಾ ಒತ್ತಡದಲ್ಲಿರುವಾಗ ಸೈರಣೆಯಿಂದಿರುವುದು, ವಿಶೇಷವಾಗಿ ದೀರ್ಘಾವಧಿಯ ಕಷ್ಟಗಳು ಎದುರಾದಾಗ. ತಾಳ್ಮೆಯು ಋಣಾತ್ಮಕತೆಯ ಮುನ್ನ ಒಬ್ಬರು ಹೊಂದಿರಬಹುದಾದ ಸಹಿಷ್ಣುತೆಯ ಮಟ್ಟ. ಇದನ್ನು ದೃಢವಾಗಿರುವ ನಡತೆಯ ಲಕ್ಷಣವನ್ನು ಸೂಚಿಸಲೂ ಬಳಸಲಾಗುತ್ತದೆ.

ಹಿಂದೂ ಧರ್ಮದಲ್ಲಿ

ಬದಲಾಯಿಸಿ

ಹಿಂದೂ ಧರ್ಮದಲ್ಲಿ, ತಾಳ್ಮೆ ಮತ್ತು ಸೈರಣೆಯನ್ನು ಅತ್ಯಗತ್ಯ ಸದ್ಗುಣವೆಂದು ಪರಿಗಣಿಸಲಾಗುತ್ತದೆ.[] ಹಿಂದೂ ಧರ್ಮದ ಪ್ರಾಚೀನ ಸಾಹಿತ್ಯದಲ್ಲಿ, ತಾಳ್ಮೆಯ ಪರಿಕಲ್ಪನೆಯನ್ನು ಪರಿಷಹ ಶಬ್ದವನ್ನು ಬಳಸಿ ಸೂಚಿಸಲಾಗುತ್ತದೆ. ತಾಳ್ಮೆಯನ್ನು ಸೂಚಿಸಲು ಇನ್ನೂ ಹಲವಾರು ಇತರ ಶಬ್ದಗಳಿವೆ ಸಹಿಷ್ಣುತೆ, ತಿತಿಕ್ಷ, ಸಹನಶೀಲತೆ.

ಉಲ್ಲೇಖಗಳು

ಬದಲಾಯಿಸಿ
"https://kn.wiki.x.io/w/index.php?title=ತಾಳ್ಮೆ&oldid=1167791" ಇಂದ ಪಡೆಯಲ್ಪಟ್ಟಿದೆ