ಧನಂಜಯ ಕುಂಬ್ಳೆ
ಇವರು ಕನ್ನಡ ಮತ್ತು ತುಳುವಿನ ಕವಿ, ವಿಮರ್ಶಕ, ಕನ್ನಡ ಪ್ರಾಧ್ಯಾಪಕರು,ಸಂಶೋಧಕರು.
ಡಾ.ಧನಂಜಯ ಕುಂಬ್ಳೆ | |
---|---|
ಜನನ | ಕುಂಬ್ಳೆ |
ವೃತ್ತಿ | ಪ್ರಾಧ್ಯಾಪಕ |
ರಾಷ್ಟ್ರೀಯತೆ | ಭಾರತೀಯ |
ಕಾಲ | ಅಧುನಿಕ |
ಪ್ರಕಾರ/ಶೈಲಿ | ಕಾವ್ಯ |
ವಿಷಯ | ಸಾಹಿತ್ಯ ಮತ್ತು ವಿಮರ್ಶೆ |
ಹುಟ್ಟು
ಬದಲಾಯಿಸಿಧನಂಜಯ ಕುಂಬ್ಳೆ[೧] ಇವರು ಕಾಸರಗೋಡು ಜಿಲ್ಲೆಯ ಕಾಸರಗೋಡು ತಾಲೂಕಿನ ಕುಂಬ್ಳೆ ಗ್ರಾಮದಲ್ಲಿ ಜನಿಸಿದರು. ತಂದೆ ನಾರಾಯಣ ಎಂ, ತಾಯಿ ಶಾರದ.
ವಿದ್ಯಾಭ್ಯಾಸ
ಬದಲಾಯಿಸಿಇವರು ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಅಜ್ಜಿಬೆಟ್ಟು ಕಿರಿಯ ಪ್ರಾಥಮಿಕ ಶಾಲೆ ಬಂಟ್ವಾಳ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಬ್ಳೆಯಲ್ಲಿ,ಪ್ರೌಡಶಾಲೆಯನ್ನು ಸರಕಾರಿ ಪ್ರೌಡಶಾಲೆ ಕುಂಬ್ಳೆಯಲ್ಲಿ,ಕಾಲೇಜು ಶಿಕ್ಷಣವನ್ನು ಸರಕಾರಿ ಕಾಲೇಜು ಕಾಸರಗೋಡುವಿನಲ್ಲಿ ಮುಗಿಸಿದ್ದಾರೆ.ಹಾಗೆನೆ ಕಣ್ಣೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿ,ಅದುವೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.
ಪಿಹೆಚ್.ಡಿ
ಬದಲಾಯಿಸಿಅರುಣಾಬ್ಜ ಮತ್ತು ಕುಮಾರವ್ಯಾಸ ತೌಲನಿಕ ಅಧ್ಯಯನ.
ಉದ್ಯೋಗ
ಬದಲಾಯಿಸಿ- ವಿವೇಕಾನಂದ ಮಹಾವಿದ್ಯಾಲಯದಲ್ಲಿ[೨] ಕನ್ನಡ ಉಪನ್ಯಾಸಕರು-೧೯೯೯-೨೦೦೫.
- ಆಳ್ವಾಸ್ ಕಾಲೇಜು ಮೂಡಬಿದ್ರೆಯಲ್ಲಿ[೩] ಸಹಾಯಕ ಪ್ರಾಧ್ಯಾಪಕರು-೨೦೦೫-೨೦೧೨.
- ಪ್ರಸ್ತುತ ಇವರು ಮಂಗಳೂರು ವಿಶ್ವವಿದ್ಯಾನಿಲಯದ ಎಸ್,ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿತ್ತಿದ್ದಾರೆ.
ನಿರ್ವಹಿಸಿದ ಹುದ್ದೆಗಳು
ಬದಲಾಯಿಸಿ- ಶ್ರೀ ಪಿ.ಸತೀಶ್ ಪೈ ಮತ್ತು ಪಿ.ದಯಾನಂದ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರು .
- ಮಂಗಳೂರು ವಿವಿಯ ಪ್ರಸಾರಾಂಗದ ಸಹ ನಿರ್ದೇಶಕರು
- ಮಂಗಳೂರು ವಿವಿಯ ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕರು
- ಮಂಗಳೂರು ವಿವಿ ಸಾಂಸ್ಕೃತಿಕ ನೀತಿ ಸಮಿತಿಯ ನೋಡಲ್ ಆಫೀಸರ್
- ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ
ಪರಿಣತಿ
ಬದಲಾಯಿಸಿ- ೮ ಮಂದಿ ಇವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ನಡೆಸುತ್ತಿದ್ದಾರೆ.
ಬರೆದ ಕೃತಿಗಳು
ಬದಲಾಯಿಸಿಕವನ ಸಂಕಲನ
ಬದಲಾಯಿಸಿ- ಮೊದಲ ಪಾಪ
- ಹಾಡು ಕಲಿತ ಹಕ್ಕಿಗೆ
- ಹಣತೆ ಹಾಡು
ವಿಮರ್ಶೆ
ಬದಲಾಯಿಸಿ- ನಾನು ಮತ್ತು ಆಕಾಶ
ವ್ಯಕ್ತಿ ಚಿತ್ರ
ಬದಲಾಯಿಸಿ- ನಿರಂಜನ ವ್ಯಕ್ತಿ ಚಿತ್ರ.
- ಕಜಂಪಾಡಿ ರಾಮ ವ್ಯಕ್ತಿ ಚಿತ್ರ.
ಸಂಶೋಧನ ಕೃತಿಗಳು
ಬದಲಾಯಿಸಿಸಂಪಾದಿತ ಕೃತಿಗಳು
ಬದಲಾಯಿಸಿಪ್ರಶಸ್ತಿ
ಬದಲಾಯಿಸಿ- ಮುಂಬಯಿ ಕರ್ನಾಟಕ ಸಂಘ ನೀಡುವ "ಪೇಜಾವರ ಸದಾಶಿವರಾವ್ ಕಾವ್ಯ ಪ್ರಶಸ್ತಿ".
- ಕಾಂತಾವರ ಕನ್ನಡ ಸಂಘದ "ಮುದ್ದಣ ಕಾವ್ಯ ಪ್ರಶಸ್ತಿ"
- ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಮಯೂರವರ್ಮ ಪ್ರಶಸ್ತಿ.
ಉಲ್ಲೇಖ
ಬದಲಾಯಿಸಿ- ↑ http://www.mangaloreuniversity.ac.in/drdhananjaya
- ↑ "ಆರ್ಕೈವ್ ನಕಲು". Archived from the original on 2017-09-27. Retrieved 2017-09-25.
- ↑ http://alvascollege.com/