ಲಕ್ಷ್ಮೀ ನಿವಾಸ (ಕನ್ನಡ ಧಾರಾವಾಹಿ)

ಲಕ್ಷ್ಮೀ ನಿವಾಸ ಪ್ರಸ್ತುತ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದೆ. ಈ ಧಾರಾವಾಹಿಯು 2024ರ ಜನವರಿ 16 ರಂದು ಝೀ ಕನ್ನಡದಲ್ಲಿ ಪ್ರಥಮ ಪ್ರದರ್ಶನಗೊಂಡಿತು[]. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಹಿರಿಯ ನಟಿ ವಿನೋದಿನಿ ಆಲಿಯಾಸ್ ಶ್ವೇತಾ, ರಂಗಭೂಮಿ ನಟ ಅಶೋಕ್ ಜೆಂಬೆ, ದಿಶಾ ಮದನ್, ಚಂದನ ಆನಂತಕೃಷ್ಣ ಮತ್ತು ಮಧು ಹೆಗ್ಡೆ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.


ಲಕ್ಷ್ಮೀ ನಿವಾಸ (ಕನ್ನಡ ಧಾರಾವಾಹಿ)
ಟೈಟಲ್ ಕಾರ್ಡ್
ಶೈಲಿದೈನದಿಂದ ಧಾರಾವಾಹಿ
ದೇಶಭಾರತ
ಭಾಷೆ(ಗಳು)ಕನ್ನಡ
ಪ್ರಸಾರಣೆ
ಮೂಲ ವಾಹಿನಿಝೀ ಕನ್ನಡ
ಮೂಲ ಪ್ರಸಾರಣಾ ಸಮಯ16 ಜನವರಿ 2024 – ಪ್ರಸ್ತುತ


ಕಥಾ ವಸ್ತು

ಬದಲಾಯಿಸಿ

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವ ಲೋಕರೂಢಿಯ ಮಾತನ್ನೇ ಎಳೆಯಾಗಿಟ್ಟುಕೊಂಡು ಸಿದ್ಧಗೊಂಡಿದೆ. ಈ ಧಾರಾವಾಹಿ ಕಥೆಯು ಮಧ್ಯಮ ವರ್ಗದ ಕುಟುಂಬಗಳ ಜೀವನದ ಮೇಲೆ ಹೆಚ್ಚು ಕೇಂದ್ರಿಕೃತವಾಗಿದೆ. ಮಧ್ಯಮ ವರ್ಗದ ಜನರು ತಮ್ಮ ಕನಸು ನನಸಾಗಿಸಲು ಜೀವನಪೂರ್ತಿ ಅನುಭವಿಸುವ ಕಷ್ಟ- ಸುಖ, ನೋವು- ನಲಿವಿನೊಂದಿಗೆ ಸವೆಸುವ ಬದುಕಿನ ಹಾದಿ ಈ ಕಥೆಯ ತಿರುಳಾಗಿದೆ.

ಕಥಾ ಹಂದರ

ಬದಲಾಯಿಸಿ

ಲಕ್ಷ್ಮೀ ಮತ್ತು ಶ್ರೀನಿವಾಸ ದಂಪತಿಗಳಿಗೆ ಆರು ಮಂದಿ ಮಕ್ಕಳು. ಮೂವರು ಗಂಡು ಮಕ್ಕಳು, ಮೂವರಲ್ಲಿ ಒಬ್ಬ ಮಗನನ್ನು ದತ್ತು ತೆಗೆದುಕೊಂಡಿದ್ದಾರೆ. ಮೂವರು ಹೆಣ್ಣು ಮಕ್ಕಳು. ಕುಟುಂಬದಲ್ಲಿ ನಾಲ್ಕು ತಲೆಮಾರಿನ ವಿಭಿನ್ನ ಪಾತ್ರಗಳು. ಒಬ್ಬೊಬ್ಬರದು ಒಂದೊಂದು ಆಸೆ, ಕನಸು, ವ್ಯಕ್ತಿತ್ವ ಆಗಿದೆ. ಹೀಗೆ ಕೂಡು ಕುಟುಂಬದ ಜೀವನಾನುಭವವನ್ನು ಕಥೆಯಲ್ಲಿ ತೋರಿಸಲಾಗಿದೆ.

ಹಿರಿ ಮಗ ಸಂತೋಷ್‌ ತನ್ನ ಸಿಡುಕು ಸ್ವಭಾವ, ದುಡುಕು ಬುದ್ದಿ, ಜೊತೆಗೆ ಜಿಪುಣನಾಗಿದ್ದಾನೆ. ಯಾವಾಗ್ಲೂ ತಾನು ತನ್ನ ಹೆಂಡ್ತಿ, ಮಗು ಅಷ್ಟರ ಬಗ್ಗೆ ಮಾತ್ರ ಯೋಚನೆ ಮಾಡುವ ಬುದ್ದಿ ಇರುವವನು. ಹಿರಿಯ ಮಗನಾಗಿ ಮನೆಗೆ ನೆರವಾಗಿ, ಮನೆಗೆ ಒಳ್ಳೆಯ ಮಗನಾಗಿ ಇರುವ ಯೋಚನೆಯೇ ಇಲ್ಲದೇ, ಎಲ್ಲವನ್ನೂ ತನಗಾಗಿ ಕೂಡಿಟ್ಟು ಕೊಳ್ಳುವ ಗುಣ. ಮಂಗಳಳ ಅವಳಿ ಸೋದರ.

ಎರಡನೇ ಮಗಳು ಮಂಗಳಳ ಮದುವೆಯಾಗಿದೆ. ಆದರೂ ತಂದೆ-ತಾಯಿಯಲ್ಲಿರುವ ಹಣದ ಮೇಲೆಯೆ ಕಣ್ಣು. ಸಂತೋಷ್‌ನ ಅವಳಿ ಸೋದರಿ.

ಮೂರನೇಯವಳು ಭಾವನ, ಜಾತಕ ದೋಷದಿಂದ ವಯಸ್ಸು ಮೂವತ್ತು ದಾಟಿದರೂ ಮದುವೆಯಾಗಿಲ್ಲ ಎಂಬ ಚಿಂತೆಯಿಂದ ತಾಯಿ ಲಕ್ಷ್ಮೀ ಕೊರುಗುತ್ತಾಳೆ. ಇತ್ತ ಭಾವನಳಿಗೆ ಅವಳು ಕೆಲಸ ಮಾಡುತ್ತಿರುವ ಆಫೀಸಿನ ಬಾಸ್ ಶ್ರೀಕಾಂತ್ ಮನೆಯಿಂದ ಸಂಬಂಧ ಬರುತ್ತದೆ. ಶ್ರೀಕಾಂತ್‌ಗೆ ಈಗಾಗಲೇ ಮದುವೆಯಾಗಿ ಖುಷಿ ಎನ್ನುವ ಹೆಸರಿನ ಮಗು ಇರುತ್ತದೆ. ಆಫೀಸಿನಲ್ಲಿ ಭಾವನಳನ್ನು ಹಾಗೂ ಖುಷಿಯನ್ನು ನೋಡಿ ಶ್ರೀಕಾಂತ್‌ನ ತಾಯಿ ವನಜಾ ಭಾವನಳೇ ತನ್ನ ಮೊಮ್ಮಗುವಿಗೆ ಅಮ್ಮ ಆಗಿದ್ದರೆ ಒಳ್ಳೆಯದಾಗಿತ್ತು ಎಂದು ಸಂಬಂಧ ಕಳುಹಿಸುತ್ತಾಳೆ. ಭಾವನಳಾ ಜಾತಕ ದೋಷದ ಬಗ್ಗೆ ಮನೆಯವರು ಹೇಳುತ್ತಾರೆ. ತಾವು ಅದನ್ನೇಲ್ಲ ನಂಬಲ್ಲ ಎಂದು ಹೇಳಿ ಮದುವೆಗೆ ಮೂಹರ್ತ ಫಿಕ್ಸ್ ಮಾಡುತ್ತಾರೆ. ಭಾವನಳಾ ದುರಾದೃಷ್ಟಕ್ಕೆ ಮದುವೆಯದಿನ ಶ್ರೀಕಾಂತ್, ಅವನ ತಾಯಿ ವನಜಾ ಹಾಗೂ ಅವನ ಮಗಳು ಖುಷಿ ಬರುತ್ತಿದ್ದ ಕಾರು ಅಪಘಾತವಾಗುತ್ತದೆ. ಅಪಘಾತದಲ್ಲಿ ಶ್ರೀಕಾಂತ್ ಮತ್ತು ಅವನ ತಾಯಿ ತೀರಿಹೋದರೆ, ಖುಷಿ ಪಾರಾಗುತ್ತಾಳೆ. ಆದರೆ ಮಗುವಿನ ಕಾಲಿಗೆ ಪೆಟ್ಟಾಗುತ್ತದೆ. ಖುಷಿ ಭಾವನಳಾ ಜೊತೆ ಹೋಗಲು ಇಷ್ಟ ಪಡುತ್ತದೆ. ಆದರೆ, ಶ್ರೀಕಾಂತ್ ತಂಗಿ ಸೌಪರ್ಣಿಕ ಹಾಗೂ ಅವಳ ಗಂಡ ರವಿ, ಖುಷಿಯನ್ನು ಭಾವನಾಳಿಗೆ ಕೊಡಲು ನಿರಾಕರಿಸುತ್ತಾರೆ. ಶ್ರೀಕಾಂತ್ ನ ವಕೀಲರಿಂದ ಖುಷಿಗೆ ಹದಿನೆಂಟು ವಯಸ್ಸು ಆಗುವವರೆಗೆ ಆಸ್ತಿಯ ಸಂಪೂರ್ಣ ಹಕ್ಕು ಭಾವನ ನಿರ್ವಹಿಸ ಬೇಕೆಂದು ಇರುತ್ತದೆ. ಇದನ್ನು ಬಳಸಿಕೊಂಡು ಲಕ್ಷ್ಮೀ ಖುಷಿಯನ್ನು ಭಾವನಳಿಗೆ ಕೊಡುವಂತೆ ಮಾಡುತ್ತಾಳೆ. ಸಿದ್ಧೇ ಗೌಡರಿಗೆ ಭಾವನಳ ಮೇಲೆ ಪ್ರೀತಿ ಇರುತ್ತದೆ. ಆದರೆ, ಅವಳು ತನ್ನ ಅಕ್ಕ ಸಿಂಚನಳಾ ಅತ್ತಿಗೆ ಎಂದು ಜಾಹ್ನವಿ ಮದುವೆ ಸಮಯದಲ್ಲಿ ತಿಳಿಯುತ್ತದೆ. ಭಾವನಳನ್ನು ಕಳೆದುಕೊಳ್ಳುವ ಭಯದಿಂದ ಜಾತ್ರೆ ಸಮಯದಲ್ಲಿ ದೇವಿಗೆಂದು ಇದ್ದ ತಾಳಿಯನ್ನು ಭಾವನ ಮಲಗಿದ್ದಾಗ ಅವಳಿಗೆ ಕಟ್ಟುತ್ತಾನೆ.


ನಾಲ್ಕನೇಯವನು ಹರೀಶ್, ಇತನು ತನ್ನ ಅಕ್ಕನಿಗಿಂತ ಮುಂಚೆ ಪ್ರೀತಿ ಮಾಡಿ ಓಡಿ ಹೋಗಿ ಸಿದ್ಧೇ ಗೌಡನ ಅಕ್ಕ ಸಿಂಚನನ್ನು ಮದುವೆಯಾಗಿ ಬರುತ್ತಾನೆ. ಮನೆಯ ಮೇಲಿನ ಜವಬ್ದಾರಿ ತೆಗೆದುಕೊಳ್ಳಲು ನಿರಾಕರಿಸುತ್ತಾನೆ.

ಕೊನೆಯ ಮಗಳು ಜಾಹ್ನವಿ, ಇನ್ನೂ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಇವಳ ಸ್ನೇಹಿತ ವಿಶ್ವನಿಗೆ ಇವಳ ಮೇಲೆ ಪ್ರೀತಿ ಇರುತ್ತದೆ, ಆದರೆ ಸ್ನೇಹ ಕಳೆದು ಕೊಳ್ಳುವ ಭಯದಿಂದ ಇಷ್ಟರವರೆಗೆ ಅವಳಿಗೆ ಈ ವಿಷಯವನ್ನು ಹೇಳಿರುವುದಿಲ್ಲ. ಜಯಂತ್‌ ಎನ್ನುವ ಅನಾಥ, ಶ್ರೀಮಂತನೊಬ್ಬ ಈಗ ತಾನೇ ಡಿಗ್ರಿ ಶಿಕ್ಷಣ ಪಡೆಯುತ್ತಿರುವ ಮಧ್ಯಮವರ್ಗದ ಜಾಹ್ನವಿಯನ್ನು ಅವನು ಪ್ರೀತಿಸಿ ಜಾಹ್ನವಿಯನ್ನು ಮದುವೆ ಆಗುತ್ತಾನೆ. ಜಯಂತ್ ತನ್ನ ಹೆಂಡ್ತಿ ಜಾಹ್ನವಿಯನ್ನು ತುಂಬ ಇಷ್ಟಪಡ್ತಾನೆ, ಅವಳು ನನಗೆ ಮಾತ್ರ ಸ್ವಂತ, ಅವಳು ನನ್ನ ಮಾತ್ರ ಪ್ರೀತಿ ಮಾಡಬೇಕು, ನನ್ನ ಜೊತೆ ಮಾತ್ರ ಆತ್ಮೀಯತೆಯಿಂದ ಇರಬೇಕು, ನನಗೆ ಮಾತ್ರ ಆದ್ಯತೆ ಕೊಡಬೇಕು ಎಂದು ಜಯಂತ್ ಬಯಸುತ್ತಾನೆ. ಒಳ್ಳೆಯವನ ಥರ ಮುಖವಾಡ ಹಾಕಿಕೊಂಡಿರುವ ಜಯಂತ್ ಅಸಲಿ ಮುಖ ಏನು ಅಂತ ಇನ್ನೂ ಜಾಹ್ನವಿಗೆ ತಿಳಿದಿಲ್ಲ.

ಇನ್ನೂ ಲಕ್ಷ್ಮೀ ಮತ್ತು ಶ್ರೀನಿವಾಸ ದಂಪತಿಗಳ ದತ್ತು ಪುತ್ರ ವೆಂಕಿಗೆ ಮಾತುಬರುವುದಿಲ್ಲ. ಬಾಲ್ಯದಿಂದಲ್ಲೇ ವೆಂಕಿಯನ್ನು ಈ ದಂಪತಿಗಳು ತಮ್ಮ ಮಗನಂತೆ ಸಾಕುತ್ತಿದ್ದಾರೆ. ವೆಂಕಿ ಚೆಲುವಿ ಎನ್ನುವ ಹೂ ಮಾರುವ ಹುಡುಗಿಯನ್ನು ದೇವಸ್ಥಾನದಲ್ಲಿ ಮದುವೆಯಾಗುತ್ತಾನೆ.

ಪ್ರಸಾರ

ಬದಲಾಯಿಸಿ

ಸೋಮವಾರದಿಂದ ಶುಕ್ರವಾರದವೆರೆಗೆ ರಾತ್ರಿ ೮ ಗಂಟೆಗೆ ಪ್ರಸಾರವಾಗುತ್ತದೆ.

ಕಲಾವಿದರ ಆಯ್ಕೆ

ಬದಲಾಯಿಸಿ

ಈ ಧಾರಾವಾಹಿಯಲ್ಲಿ ಬಹುತಾರಾಗಂಣವೇ ಇದೆ[]. ಪ್ರತಿ ಪಾತ್ರಕ್ಕೂ ಆದರೆ ಆದ ಪ್ರಾಮುಖ್ಯತೆ ಇದೆ. ಪಾತ್ರಕ್ಕೆ ತಕ್ಕಂತೆ ಪರದೆಯ ಸಮಯವನ್ನು ವಿಭಜಿಸಲಾಗಿದೆ.

ಪಾತ್ರವರ್ಗ

ಬದಲಾಯಿಸಿ
ಮುಖ್ಯಪಾತ್ರಗಳು
  • ಶ್ವೇತಾ ಆಲಿಯಾಸ್ ವಿನೋದಿನಿ[]: ಮನೆ ಯಜಮಾನಿ ಲಕ್ಷ್ಮೀ ಪಾತ್ರದಲ್ಲಿ.ಶ್ರೀನಿವಾಸ್‌ನ ಹೆಂಡತಿಯಾಗಿ.
  • ಅಶೋಕ್ ಜೆಂಬೆ[]: ಮನೆ ಯಾಜಮಾನ ಶ್ರೀನಿವಾಸ್ ಪಾತ್ರದಲ್ಲಿ. ಲಕ್ಷ್ಮೀ ಗಂಡನಾಗಿ.
ಪೋಷಕ ಪಾತ್ರಗಳು
ಬದಲಾಯಿಸಿ
ಲಕ್ಷ್ಮೀ ಮತ್ತು ಶ್ರೀನಿವಾಸ್ ದಂಪತಿಯ ಮಕ್ಕಳು
ಬದಲಾಯಿಸಿ
  • ಮಧು ಹೆಗಡೆ[]: ಲಕ್ಷ್ಮೀ ಮತ್ತು ಶ್ರೀನಿವಾಸ್ ದಂಪತಿಯ ಹಿರಿ ಮಗ ಸಂತೋಷ್ ಪಾತ್ರದಲ್ಲಿ.
  • ಮಹಾಲಕ್ಷ್ಮೀ[]: ಲಕ್ಷ್ಮೀ ಮತ್ತು ಶ್ರೀನಿವಾಸ್ ದಂಪತಿಯ ಎರಡನೇ ಮಗಳು ಮಂಗಳಾ ಪಾತ್ರದಲ್ಲಿ.
  • ದಿಶಾ ಮದನ್[]: ಲಕ್ಷ್ಮೀ ಮತ್ತು ಶ್ರೀನಿವಾಸ್ ದಂಪತಿಯ ಮೂರನೇ ಮಗಳು ಭಾವಾನ ಪಾತ್ರದಲ್ಲಿ.
  • ಅಜಯ್ ರಾಜ್: ಲಕ್ಷ್ಮೀ ಮತ್ತು ಶ್ರೀನಿವಾಸ್ ದಂಪತಿಯ ನಾಲ್ಕನೇ ಮಗ ಹರೀಶ್ ಪಾತ್ರದಲ್ಲಿ.
  • ಚಂದನ ಆನಂತಕೃಷ್ಣ: ಲಕ್ಷ್ಮೀ ಮತ್ತು ಶ್ರೀನಿವಾಸ್ ದಂಪತಿಯ ಕಿರಿ ಮಗಳು ಜಾಹ್ನವಿ ಪಾತ್ರದಲ್ಲಿ. ಜಯಂತ್ ಹೆಂಡತಿಯಾಗಿ.
  • ಚಂದ್ರಶೇಖರ್ ಶಾಸ್ತ್ರಿ[]: ಲಕ್ಷ್ಮೀ ಮತ್ತು ಶ್ರೀನಿವಾಸ್ ದಂಪತಿಯ ದತ್ತು ಮಗ ವೆಂಕಿ ಆಲಿಯಾಸ್ ವೆಂಕೆಟೇಶ್ ಪಾತ್ರದಲ್ಲಿ. ಚೆಲ್ವಿ ಗಂಡನಾಗಿ. ಸಂತೋಷ್, ಭಾವನ, ಹರೀಶ್, ಜಾಹ್ನವಿ ದತ್ತು ಸೋದರನಾಗಿ.
ಲಕ್ಷ್ಮೀ ಮತ್ತು ಶ್ರೀನಿವಾಸ್ ದಂಪತಿಯ ಅಳಿಯದಿಂದರು ಹಾಗೂ ಸೊಸೆಯಂದಿರು
ಬದಲಾಯಿಸಿ
  • ಲಕ್ಷ್ಮೀ ಹೆಗಡೆ[]: ಲಕ್ಷ್ಮೀ ಮತ್ತು ಶ್ರೀನಿವಾಸ್ ದಂಪತಿಯ ಹಿರಿ ಸೊಸೆ ವೀಣಾ ಪಾತ್ರದಲ್ಲಿ. ಜಿಪುಣ ಸಂತೋಷ್ ಹೆಂಡತಿಯಾಗಿ.
  • ರೂಪಶ್ರೀ: ಲಕ್ಷ್ಮೀ ಮತ್ತು ಶ್ರೀನಿವಾಸ್ ದಂಪತಿಯ ಎರಡನೇ ಸೊಸೆ ಸಿಂಚನ ಪಾತ್ರದಲ್ಲಿ. ಹರೀಶ್ ಹೆಂಡತಿಯಾಗಿ. ಸಿದ್ದೇ ಗೌಡನ ಅಕ್ಕನಾಗಿ.
    • ದಿವ್ಯಶ್ರೀ
  • ದೀಪಕ್ ಸುಬ್ರಮಣ್ಯ[೧೦]: ಲಕ್ಷ್ಮೀ ಮತ್ತು ಶ್ರೀನಿವಾಸ್ ದಂಪತಿಯ ಕಿರಿ ಅಳಿಯ ಜಯಂತ್ ಪಾತ್ರದಲ್ಲಿ. ಜಾಹ್ನವಿ ಸೈಕೋ ಗಂಡನಾಗಿ.
  • ಧನಂಜಯ್[೧೧] [೧೨]: ಸಿದ್ಧೇ ಗೌಡ ಪಾತ್ರದಲ್ಲಿ. ತನಗಿಂತ ವಯಸ್ಸಿನಲ್ಲಿ ದೊಡ್ಡವಳಾದ ಭಾವನಳನ್ನು ಪ್ರೀತಿ ಮಾಡುತ್ತಿರುವುದು. ಸಿಂಚನ ತಮ್ಮನಾಗಿ.
  • ಅಶ್ವಿನಿ ಆರ್. ಮೂರ್ತಿ: ಲಕ್ಷ್ಮೀ ಮತ್ತು ಶ್ರೀನಿವಾಸ್ ದಂಪತಿಯ ದತ್ತು ಪುತ್ರ ವೆಂಕಿಯ ಹೆಂಡತಿ ಚೆಲ್ವಿ ಪಾತ್ರದಲ್ಲಿ.
ಇತರ ಪಾತ್ರಗಳು
ಬದಲಾಯಿಸಿ
  • ಎಮ್.ಎನ್. ಲಕ್ಷ್ಮೀ ದೇವಿ: ಶ್ರೀನಿವಾಸ್ ತಾಯಿಯಾಗಿ.
  • ನಿಶಿತಾ[೧೩]: ಖುಷಿ ಪಾತ್ರದಲ್ಲಿ. ಶ್ರೀಕಾಂತ್ ಮಗಳಾಗಿ. ಭಾವನ ದತ್ತು ಮಗಳಾಗಿ.
  • ಕಿಶೋರ್ ರಾವ್: ರವಿ ಪಾತ್ರದಲ್ಲಿ.

ಯಶಸ್ವಿನಿ ಕೆ. ಸ್ವಾಮಿ: ಸೌರ್ಪಣಿಕ ಪಾತ್ರದಲ್ಲಿ. ಶ್ರೀಕಾಂತ್ ತಂಗಿಯಾಗಿ. ರವಿ ಹೆಂಡತಿಯಾಗಿ. ಖುಷಿ ಸೋದರತ್ತೆಯಾಗಿ.

  • ಮಾನಸ ಮನೋಹರ್: ನೀಲು ಪಾತ್ರದಲ್ಲಿ. ಸಿದ್ದೇ ಗೌಡ ಹಾಗೂ ಸಿಂಚನ ಅತ್ತಿಗೆಯಾಗಿ. ನರಸಿಂಹನ ಸೊಸೆಯಾಗಿ.
  • ಪ್ರಕೃತಿ ಪ್ರಸಾದ್: ಪೂರ್ವಿ ಪಾತ್ರದಲ್ಲಿ. ಸಿದ್ದೇ ಗೌಡರಿಗೆ ನಿಶ್ಚಿರ್ಥಾವಾಗಿರುವ ಹುಡುಗಿ ಪಾತ್ರದಲ್ಲಿ.
  • ?: ಮಾಜಿ ಎಮ್‌ಎಲ್‌ಎ ಜಾವರೆಗೌಡ ಪಾತ್ರದಲ್ಲಿ. ಸಿಂಚನ, ಸಿದ್ದೇ ಗೌಡರ ತಂದೆಯಾಗಿ.
ಗೌರವ ಪಾತ್ರಗಳು
ಬದಲಾಯಿಸಿ
  • ರಾಘು ಮುಖರ್ಜಿ[೧೪]: ಶ್ರೀಕಾಂತ್ ಪಾತ್ರದಲ್ಲಿ. ಖುಷಿ ತಂದೆಯಾಗಿ. ಸೌಪರ್ಣಿಕ ಅಣ್ಣನಾಗಿ ಮತ್ತು ಭಾವನ ಮದುವೆಯಾಗಬೇಕಾಗಿದ್ದ ವರ.
  • ಪವಿತ್ರಲೋಕೆಶ್: ವನಜಾ ಪಾತ್ರದಲ್ಲಿ.

ಬಾಹ್ಯಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಸ್ವಂತ ಮನೆಯ ಕನಸಿನ ಗೂಡೇ ʻಲಕ್ಷ್ಮಿ ನಿವಾಸʼ: ಕಿರುತೆರೆಗೆ ಸ್ಯಾಂಡಲ್ವುಡ್‌ ನಟಿಮಣಿಯರ ಕಂಬ್ಯಾಕ್". ಝಿ ನ್ಯೂಸ್ ಇಂಡಿಯಾ. Retrieved 7 ಜನವರಿ 2024.
  2. "ಲಕ್ಷ್ಮೀ ನಿವಾಸ' ಸೀರಿಯಲ್ ಕಲಾವಿದರ ನಿಜವಾದ ಹೆಸರು, ವಯಸ್ಸು ಹಾಗೂ ಶಿಕ್ಷಣ ಏನು ಗೊತ್ತಾ?". ಫಿಲ್ಮಿಬೀಟ್ ಕನ್ನಡ. Retrieved 1 ಏಪ್ರಿಲ್ 2024.
  3. "'ಲಕ್ಷ್ಮೀ ನಿವಾಸ' ಧಾರಾವಾಹಿ ಮೂಲಕ 'ಚೈತ್ರದ ಪ್ರೇಮಾಂಜಲಿ' ನಟಿ ಶ್ವೇತಾ ರೀ-ಎಂಟ್ರಿ". ವಿಜಯ ಕರ್ನಾಟಕ. Retrieved 12 Jul 2024.
  4. "ಲಕ್ಷ್ಮಿ ನಿವಾಸ' ಧಾರಾವಾಹಿ ಶ್ರೀನಿವಾಸ ಪಾತ್ರಧಾರಿಯ ರಿಯಲ್‌ ಹೆಸರೇನು? ರಂಗಭೂಮಿಯಲ್ಲೂ ಇವರದ್ದು ದೊಡ್ಡ ಹೆಸರು". ಹಿಂದೂಸ್ತಾನ್ ಟೈಮ್ಸ್ ಕನ್ನಡ. Retrieved 13 ಏಪ್ರಿಲ್ 2024.
  5. "ಲಕ್ಷ್ಮೀ ನಿವಾಸದಲ್ಲಿ ತನ್ನ ಪಾತ್ರದಿಂದಲೇ ವೀಕ್ಷಕರಿಂದ ಬೈಸಿಕೊಳ್ಳುವ ಜುಗ್ಗ ಸಂತೋಷ್ ರಿಯಲ್ ಲೈಫಲ್ಲೂ ಹಿಂಗೆನಾ?". ಏಷ್ಯಾನೆಟ್ ಸುವರ್ಣ ನ್ಯೂಸ್. Retrieved 29 ಆಗಸ್ಟ್ 2024.
  6. "ಲಕ್ಷ್ಮಿ ನಿವಾಸ ಸಿರೀಯಲ್‌ ನಟಿ ಮಂಗಳ ನಿಜವಾದ ಹೆಸರೇನು ಗೊತ್ತಾ? ಇವರು ರಿಯಲ್ ಲೈಫ್‌ನಲ್ಲಿ ಹೇಗಿದ್ದಾರೆ ಗೊತ್ತಾ?". ಝೀ ನ್ಯೂಸ್ ಇಂಡಿಯಾ. Retrieved 7 ಮೇ 2024.
  7. "ಲಕ್ಷ್ಮಿ ನಿವಾಸದಲ್ಲಿ ದಿಶಾ ಮದನ್:‌ ದಶಕದ ಬಳಿಕ ಕಿರುತೆರೆಗೆ ಮರಳಿದ ನಟಿ!". ಝೀ ನ್ಯೂಸ್ ಇಂಡಿಯಾ. Retrieved 27 ನವೆಂಬರ್ 2023.
  8. "ಈ ವೆಂಕಿ ಯಾರು? ನಿಜ ಜೀವನದಲ್ಲಿ ಮದುವೆಯಾಗಿದೆ". ವಿಜಯ ಕರ್ನಾಟಕ. Retrieved 28 ಮೇ 2024.
  9. "ಲಕ್ಷ್ಮೀ ನಿವಾಸ ಅತ್ತಿಗೆ ವೀಣಾ ರಿಯಲ್‌ ಲೈಪ್‌ ಹೇಗಿದೆ ಗೊತ್ತಾ? ಇವರು ಬರೀ ನಟಿ ಮಾತ್ರವಲ್ಲ!!". ಝೀ ನ್ಯೂಸ್ ಇಂಡಿಯಾ. Retrieved 19 ಆಗಸ್ಟ್ 2024.
  10. "ಲಕ್ಷ್ಮೀ ನಿವಾಸದ ಜಯಂತ್ ರಿಯಲ್ ಲೈಫ್ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ". ಏಷ್ಯಾ ನೆಟ್ ಸುವರ್ಣ ನ್ಯೂಸ್. Retrieved 9 ಮಾರ್ಚ್ 2024.
  11. "12 ವರ್ಷಗಳ ಪರಿಶ್ರಮಕ್ಕೆ ಫಲ ಸಿಕ್ಕಿದೆ'- Lakshmi Nivasa Serial ಸಿದ್ದೇಗೌಡ್ರು ಪಾತ್ರಧಾರಿ ಧನಂಜಯ". ವಿಜಯ ಕರ್ನಾಟಕ. Retrieved 12 Jul 2024.
  12. "ಅಷ್ಟಕ್ಕೂ ಲಕ್ಷ್ಮೀ ನಿವಾಸದ ಸಿದ್ಧೇ ಗೌಡ ಯಾರು?". ಹಿಂದೂಸ್ತಾನ್ ಟೈಮ್ಸ್ ಕನ್ನಡ. Retrieved 29 ಫೆಬ್ರವರಿ 2024.
  13. "ಸೋಷಿಯಲ್ ಮೀಡಿಯಾದಲ್ಲೆಲ್ಲಾ 'ಲಕ್ಷ್ಮೀ ನಿವಾಸ' ಖುಷಿ ಕರಿಮಣಿ ಮಾಲೀಕನದ್ದೇ ಸದ್ದು..!". ಫಿಲ್ಮಿಬೀಟ್ ಕನ್ನಡ. Retrieved 18 ಫೆಬ್ರವರಿ 2024.
  14. "ಲಕ್ಷ್ಮೀ ನಿವಾಸ' ನೋಡುವವರಿಗೆಲ್ಲಾ ಒಂದೇ ಪ್ರಶ್ನೆ.. ಯಾರಿಗೆ ಯಾರು ಹೀರೋ ಗುರೂ..?". ಫಿಲ್ಮಿಬೀಟ್ ಕನ್ನಡ. Retrieved 6 February 2024.