ಏಳು ಪ್ರಾಣಾಂತಿಕ ಪಾಪಗಳು

ವಧಾರ್ಹವಾದ ಅವಗುಣ ಅಥವಾ ಮೂಲಾಧಾರ ಪಾಪಗಳು ಎಂದು ಕರೆಯುವ ಏಳು ಪ್ರಾಣಾಂತಿಕ ಪಾಪಗಳು , ಅವಗುಣದ ವರ್ಗೀಕರಣದಲ್ಲೇ ಅತ್ಯಂತ ಆಕ್ಷೇಪಾರ್ಹವಾದದ್ದು ಎನ್ನಿಸುವಂತಹುದನ್ನು ಕ್ರಿಶ್ಚೀಯನ್ ಆರಂಭದ ಕಾಲದಲ್ಲಿ, ಮಾನವೀಯತೆಯನ್ನು ಮರೆತು ನಡೆಯಬಹುದಾದ ವ್ಯಕ್ತಿಗಳಿಗೆ (ಅನೈತಿಕ)ಯತ್ತ ವಾಲುತ್ತಿರುವವರಿಗೆ ಪಾಪಗಳ ಬಗ್ಗೆ ಶಿಕ್ಷಣವನ್ನು ಮತ್ತು ಸೂಚನೆಯನ್ನು ಕೊಡಬೇಕಾದರೆ ವಿವರಿಸಲಾಗುತ್ತದೆ. ಪಾಪಗಳ ಅಂತಿಮ ಪಾಠಾಂತರ ಹೀಗಿದೆ: ಕಡು ಕ್ರೋಧ, ಧನದಾಹ, ಸೋಮಾರಿತನ, ಅಹಂಕಾರ, ಭೋಗಾಪೇಕ್ಷೆ, ಅಸೂಯೆ, ಮತ್ತು ಹೊಟ್ಟೆಬಾಕತನ.

ಹೀರೋನೈಮಸ್ ಬಾಷ್‌ರವರ ದಿ ಸೆವೆನ್ ಡೆಡ್ಲಿ ಸಿನ್ಸ್ ಆಂಡ್ ದಿ ಫೋರ್ ಲಾಸ್ಟ್ ಥಿಂಗ್ಸ್

ಕ್ಯಾಥೋಲಿಕ್ ಚರ್ಚ್ ನವರು ಪಾಪಗಳನ್ನು ಪ್ರಧಾನವಾಗಿ ಎರಡು ವರ್ಗಗಳನ್ನಾಗಿ ವಿಂಗಡಿಸಿರುತ್ತಾರೆ : "ಕ್ಷಮಾರ್ಹವಾದ ಪಾಪಗಳು", ಇವು ಅಲ್ಪಮಟ್ಟಿನದವಾಗಿದ್ದು ಇವನ್ನು, ಪವಿತ್ರ ಕರ್ಮಗಳನ್ನು ಆಚರಿಸಿಸಿ ಅಥವಾ ಚರ್ಚ್‌ನ ಪವಿತ್ರ ಕರ್ಮಗಳನ್ನು ಮಾಡಿಸುವ ಮುಖಾಂತರ ಕ್ಷಮಿಸಬಹುದಾಗಿದೆ, ತೀವ್ರವಾದ ಪಾಪವೆಂದರೆ ಅದು "ವಧಾರ್ಹವಾದ" ಅಥವಾ ಪ್ರಾಣಾಂತಿಕ ಪಾಪಗಳು. ವಧಾರ್ಹವಾದ ಪಾಪಗಳು ಬದುಕಿನ ದೈವದತ್ತವಾದುದನ್ನು ನಾಶಮಾಡುವುದಾಗಿದೆ ಮತ್ತು ಶಾಶ್ವತವಾದ ನಿತ್ಯನರಕವಾಸದ ಭಯವನ್ನು ಹುಟ್ಟಿಸುತ್ತದೆ, ಪವಿತ್ರ ಕರ್ಮ ಮಾಡಿ, ತಪ್ಪೊಪ್ಪಿಗೆಯಿಂದ ಅಥವಾ ಪಾಪ ಕೃತ್ಯದಿಂದಾಗಿ ಪಡುವ ಪರಿತಾಪದಿಂದ ಮರುಗುವವನು ಈ ಪಾಪದಿಂದ ಮುಕ್ತಿಹೊಂದಬಹುದಾಗಿದೆ.14ನೇ ಶತಮಾನದ ಆರಂಭದಲ್ಲಿ ಈ ಏಳು ಪ್ರಾಣಾಂತಿಕ ಪಾಪಗಳ ವ್ಯಾಖ್ಯಾನವು ಯೂರೋಪಿಯನ್ ಕಲಾವಿದರ ರಚನೆಗಳಲ್ಲಿ ತತ್ವವಾಗಿ ಜನಪ್ರಿಯವಾಗಿತ್ತು ಮತ್ತು ಇದರಲ್ಲಿ ಅಂತಿಮವಾಗಿ ಕ್ಯಾಥೋಲಿಕ ಸಂಸ್ಕೃತಿ ಹಾಗೂ ಕ್ಯಾಥೋಲಿಕ್ ಜಾಗೃತಿಗಳ ಅನೇಕ ಕ್ಷೇತ್ರಗಳಲ್ಲಿ ಇದನ್ನು ಬೇರೂರಿಸಿ ಪ್ರಂಪಚಾದ್ಯಂತ ಬೆಳೆಯಲು ಅನುವಾಗುತ್ತಿತ್ತು.ಇಂಥ ಒಂದು ಪ್ರಯತ್ನವೆಂದರೆ, ಜ್ಞಾಪಕಕ್ಕಾಗಿ "ಸಾಲಿಗಿಯಾ" ಎಂಬುದನ್ನು ಮೂಲವಾಗಿ ಇರಿಸಿಕೊಂಡು ಏಳು ಪ್ರಾಣಾಂತಿಕ ಪಾಪಗಳನ್ನು ಹೀಗೆ ಹೇಳಲಾಗಿದೆ: ಸೂಪರ್ಬಿಯಾ , ಅವಾರಿಟಿಯಾ , ಲಕ್ಸೂರಿಯಾ , ಇನ್‌ವಿಡಿಯಾ , ಗುಲಾ , ಇರಾ , ಅಸೀಡಿಯಾ .[]

ಬೈಬಲ್‌ನಲ್ಲಿನ ಪಟ್ಟಿಗಳು

ಬದಲಾಯಿಸಿ

ಬುಕ್ ಆಫ್ ಪ್ರಾವರ್ಬ್ಸ್ ನಲ್ಲಿ ಹೇಳಲಾಗಿರುವ ಪ್ರಕಾರ,"ಪ್ರಭು" ನಿರ್ದಿಷ್ಟವಾಗಿ ಗಮನಿಸುವ "ಆರು ವಿಷಯವು ಪ್ರಭುಗೆ ಇಷ್ಟವಾಗದು ಮತ್ತು ಏಳನೆಯದು ಅವನ ಆತ್ಮದ ಬಗೆಗಿನ ಹೇಸಿಗೆ ಪಡುವಿಕೆ." ಅವುಗಳು :[]

  • ಅಹಂಕಾರದ ಕಣ್ಣುಗಳು
  • ಸುಳ್ಳು ಹೇಳುವ ನಾಲಗೆ
  • ಅಮಾಯಕರ ರಕ್ತ ಚೆಲ್ಲುವ ಕೈಗಳು
  • ನೀಚ ಯೋಜನೆಗಳನ್ನು ರಚಿಸುವ ಹೃದಯ
  • ಕೇಡಿನ ಕಾರ್ಯಗಳಿಗೆ ವೇಗವಾಗಿ ಓಡುವ ಪಾದಗಳು
  • ಅಡ್ದ ಹಾದಿ ಹಿಡಿಸುವ ಸುಳ್ಳು ಸಾಕ್ಷ್ಯ
  • ಸಹೋದರರಲ್ಲಿ ದ್ವೇಷವನ್ನು ಬಿತ್ತುವುದು

ಈ ಪಟ್ಟಿಯಲ್ಲಿರುವ ಏಳು ಅಂಶಗಳು ಸಾಂಪ್ರದಾಯಿಕ ಪಟ್ಟಿಗಿಂತ ಭಿನ್ನವಾಗಿದೆ, ಎರಡರಲ್ಲೂ ಇರತಕ್ಕಂಥ ಒಂದೇ ಒಂದು ಸಾಮಾನ್ಯ ಅಂಶವೆಂದರೆ ಅದು ಅಹಂಕಾರ. ಎಪಿಸ್ಟಲ್ ಟು ದಿ ಗ್ಯಲಾಟಿಯನ್ಸ್ ನಿಂದ ಮತ್ತೊಂದು ಅವಗುಣಗಳ ಪಟ್ಟಿಯಲ್ಲಿ ಸಾಂಪ್ರದಾಯಿಕವಾಗಿ ಹೇಳಿರ ತಕ್ಕಂಥ ಅಂಶಗಳು ಮೂಲಭೂತವಾಗಿ ದೊಡ್ದದೇ ಇದ್ದರೂ ಜೊತೆಗೆ ಇನ್ನೂ ಒಂದಷ್ಟನ್ನು ಸೇರಿಸಲಾಗಿದೆ : ವ್ಯಭಿಚಾರ, ಪರಸ್ಪರ ಸಮ್ಮತಿಯಿಂದ ಅವಿವಾಹಿತರ ನಡುವೆ ನಡೆಯುವ ಸಂಭೋಗ ಕ್ರಿಯೆ, ಅಶುಚಿ, ಕಾಮಪ್ರಚೋದಕತೆ, ಗೌರವಾತಿರೇಕ, ವಾಮಾಚಾರ, ವೈರ, ಭಿನ್ನಾಭಿಪ್ರಾಯ, ಉತ್ಸಾಹಪೂರ್ಣ ಅನುಕರಣೆ, ಸಿಟ್ಟು ಅಥವಾ ಕಡುಕೋಪ, ಕಲಹ, ರಾಷ್ಟ್ರದ್ರೋಹ, ಸಂಪ್ರದಾಯ ವಿರೋಧಿ ಅಭಿಪ್ರಾಯಗಳು, ಹೊಟ್ಟೆಕಿಚ್ಚು, ಕೊಲೆಗಳು, ಪಾನೋನ್ಮತ್ತತೆ, "ಹೀಗೆ ಅನೇಕ" ಅವಗುಣಗಳು.[]

ಸಾಂಪ್ರದಾಯಿಕ ಏಳು ಪ್ರಾಣಾಂತಿಕ ಪಾಪಗಳ ಅಭಿವೃದ್ಧಿ

ಬದಲಾಯಿಸಿ

4ನೇ ಶತಮಾನದಲ್ಲಿ ಬಾಳಿದ ಇವಾಗ್ರೀಯಸ್ ಪಾಂಟಿಕಸ್ ಎಂಬ ಸನ್ಯಾಸಿಯ ಕೆಲಸಗಳಿಗೆ ಏಳು ಪ್ರಾಣಾಂತಿಕ ಪಾಪಗಳ ಜೊತೆ ನಂಟನ್ನು ಕಲ್ಪಿಸಲಾಗಿದೆ, ಈ ಸನ್ಯಾಸಿ ಎಂಟು ದುಷ್ಟ ಆಲೋಚನೆಗಳನ್ನು ಗ್ರೀಕ್ ನಲ್ಲಿ ಪಟ್ಟಿ ಮಾಡಿರುವುದು ಹೀಗಿದೆ :<ಉಲ್ಲೇಖಿತ ಹೆಸರು="ಇವಾಗ್ರೀಯೋ ಪಾಂಟಿಕೊ,ಗ್ಲೀ ಒಟ್ಟೋ ಸ್ಪಿರಿಟೀ ಮಾಲ್ವಗಿ , ಟ್ರಾನ್ಸ್. ಫೆಲೀಸ್ ಕಾಮಿಲ್ಲೋ, ಪ್ರಾಟೀಚ್ ಎಡಿಟ್ರೈಸ್, ಪಾರ್ಮಾ, 1990, p.11-12.">ಇವಾಗ್ರೀಯೋ ಪಾಂಟೀಕೋ,ಗ್ಲೀ ಒಟ್ಟೋ ಸ್ಪಿರಿಟೀ ಮಾಲ್ವಗಿ , ಟ್ರಾನ್ಸ್., ಫೆಲೀಸ್ ಕಾಮಿಲ್ಲೋ, ಪ್ರಾಟೀಚ್ ಎಡಿಟ್ರೈಸ್, ಪಾರ್ಮಾ, 1990, p. 11-12.</ಉಲ್ಲೇಖ>

  • [Γαστριμαργία] Error: {{Lang}}: unrecognized language code: gk (help) (ಗ್ಯಾಸ್ಟ್ರೀಮಾರ್ಗಿಯಾ)
  • [Πορνεία] Error: {{Lang}}: unrecognized language code: gk (help) (ಪೊರ್ನೇಯಿಯಾ)
  • [Φιλαργυρία] Error: {{Lang}}: unrecognized language code: gk (help) (ಫಿಲಾರ್ಗೈರ್ಯಾ)
  • [Λύπη] Error: {{Lang}}: unrecognized language code: gk (help) (ಲೈಪ್)
  • [Ὁργῆ] Error: {{Lang}}: unrecognized language code: gk (help) (ಆರ್ಗೆ)
  • [Ἀκηδία] Error: {{Lang}}: unrecognized language code: gk (help) (ಆಕೇಡಿಯಾ)
  • [Κενοδοξία] Error: {{Lang}}: unrecognized language code: gk (help) (ಕೆನೋಡಾಕ್ಸಿಯಾ)
  • [Ὺπερηφανία] Error: {{Lang}}: unrecognized language code: gk (help) (ಹೈಪರ್‌ಫಾನಿಯಾ)

ಇವು ಲ್ಯಾಟಿನ್‌ನ ರೋಮನ್ ಕ್ಯಾಥೋಲಿಕ್ ಸ್ಪಿರಿಚ್ಯೂಲ್ ಪೀಟಾಸ್ ಗೆ ಅನುವಾದವಾಗಿದೆ (ಅಥವಾ ಕ್ಯಾಥೋಲಿಕ್ ಆರಾಧನೆಗಳಿಗೆ) ಅನುವಾದವಾಗಿದೆ, ಅದು ಈ ರೀತಿ ಇರುತ್ತದೆ:[]

ಈ ’ದುಷ್ಟ ಆಲೋಚನೆಗಳು’ ಮೂರು ಗುಂಪುಗಳನ್ನಾಗಿ ವಿಂಗಡಿಸಬಹುದು:[]

  • ಕಾಮಾಸಕ್ತಿಯುಳ್ಳ ಅಪೇಕ್ಷೆ (ಹೊಟ್ಟೆಬಾಕತನ, ಅವಿವಾಹಿತರ ನಡುವೆ ಸಂಭೋಗ, ಮತ್ತು ಹಣದಾಹ)
  • ಸಿಡುಕು (ಕೋಪ)
  • ಬುದ್ಧಿಶಕ್ತಿ (ಒಣಜಂಬ, ದು:ಖ, ಅಹಂಕಾರ, ಮತ್ತು ನಿರುತ್ಸಾಹಗೊಳಿಸಿಕೆ)

ಇವಾಗ್ರೀಯಸ್‌ನ ಪಟ್ಟಿ ಮಾಡಿದ ನಂತರ ಕೆಲವು ವರ್ಷಗಳ ತರುವಾಯ AD 590ನಲ್ಲಿ, ಪೋಪ್ ಗ್ರಿಗೋರಿ I ಆ ಪಟ್ಟಿಯನ್ನು ಪರಿಷ್ಕರಿಸಿ ಸಾಮಾನ್ಯವಾಗಿರುತಕ್ಕಂಥ ಏಳು ಪ್ರಾಣಾಂತಿಕ ಪಾಪಗಳನ್ನು ಅನ್ನು ರಚಿಸಿದನು, ಹೊಸ ಪಟ್ಟಿಯ ಪ್ರಕಾರ ದು:ಖ/ಹತಾಶೆ ಯನ್ನು ಅಸೀಡಿಯಾ ಎಂದು ಒಣಜಂಬ ವನ್ನು ಅಹಂಕಾರ ವೆಂದು ವ್ಯಾಖ್ಯಾನಿಸಿ ಮತ್ತು ಇದರ ಜೊತೆಗೆ ದುಂದುಗರಿಕೆ ಮತ್ತು ಹೊಟ್ಟೆಕಿಚ್ಚು ಅನ್ನು ಸೇರಿಸಿ, ಆ ಪಟ್ಟಿಯಿಂದ ಅವಿವಾಹಿತರ ನಡುವೆ ಸಂಭೋಗ ವನ್ನು ತೆಗೆದು ಹಾಕಲಾಯಿತು. ಪೋಪ್ ಗ್ರಿಗೋರಿ ಮತ್ತು ಡಾಂಟೆ ಅಲೀಘೇರಿ ತನ್ನ ಮಹಾಕಾವ್ಯ ದಿ ಡಿವೈನ್ ಕಾಮಿಡಿ ಯಲ್ಲಿ ಬಳಸಿರುವ ಏಳು ಪ್ರಾಣಾಂತಿಕ ಪಾಪಗಳ ಕ್ರಮ ಹೀಗಿದೆ:

  1. [luxuria] Error: {{Lang}}: text has italic markup (help) (ದುಂದುಗಾರಿಕೆ)
  2. [gula] Error: {{Lang}}: text has italic markup (help) (ಹೊಟ್ಟೆಬಾಕತನ)
  3. [avaritia] Error: {{Lang}}: text has italic markup (help) (ಹಣದಾಹ/ದುರಾಶೆ)
  4. [acedia] Error: {{Lang}}: text has italic markup (help) (ಅಸೀಡಿಯಾ/ನಿರುತ್ಸಾಹಗೊಳಿಕೆ)
  5. [ira] Error: {{Lang}}: text has italic markup (help) (ಕಡುಕೋಪ)
  6. [invidia] Error: {{Lang}}: text has italic markup (help) (ಹೊಟ್ಟೆಕಿಚ್ಚು)
  7. [superbia] Error: {{Lang}}: text has italic markup (help) (ಅಹಂಕಾರ)

ಏಳು ಪ್ರಾಣಾಂತಿಕ ಪಾಪಗಳೆಂದು ಗುರುತಿಸುವ ಮತ್ತು ವ್ಯಾಖ್ಯಾನಿಸುವ ಕ್ರಮ ಚರಿತ್ರೆಯುದ್ದಕ್ಕೂ ಅದೊಂದು ಅಸ್ಥಾಯಿ ಪ್ರಕ್ರಿಯೆ ಆಗಿದೆ ಮತ್ತು ಪ್ರತಿಯೊಂದು ಪಾಪವು ಏನು ಒಳಗೊಂಡಿದೆ ಎನ್ನಲಾಗಿದೆಯೋ ಅದು ಕಾಲದ ಜೊತೆ ಬಿಚ್ಚಿಕೊಳ್ಳುತ್ತದೆ. ಜೊತೆಗೆ ಹೆಚ್ಚುವರಿಯಾಗಿ, ಶಬ್ದಾರ್ಥ ಬದಲಾವಣೆ ಆಗಿ ಪರಿಣಮಿಸುತ್ತದೆ :

  • ಕಾಮವನ್ನು ಭೋಗಾಸಕ್ತಿ ಗೆ ಪರ್ಯಾಯವಾಗಿ ಬಳಸಲಾಗುತ್ತಿತ್ತು ಆದರೆ ಹೆಸರನ್ನು ಬಿಟ್ಟು
  • ಸೊಕೋರ್ಡಿಯಾ (ಸೋಮಾರಿತನ) ವನ್ನು ಅಸೀಡಿಯಾ ಗೆ ಬದಲಾಯಿಸಲಾಗಿದೆ.

ಇದೇ ಪರಿಷ್ಕೃತ ಪಟ್ಟಿಯನ್ನು ಡಾಂಟೆ ಬಳಸುವುದು. (ಆದಾಗ್ಯೂ, ದುಂದುವೆಚ್ಚವನ್ನು ಈ ಪಟ್ಟಿಯಿಂದ ಬಿಟ್ಟಿಲ್ಲ — ಡಾಂಟೆ ಅದನ್ನು ನರಕದ ನಾಲ್ಕನೆಯ ವೃತ್ತದಲ್ಲಿ ಶಿಕ್ಷಿಸಿದ್ದಾನೆ). ಸಂಹಿತೆಯಾಗಿ ಆಗಲಿ ಸೇರಿಸಿದಂತೆ ಆಗಲಿ ಬೈಬಲ್ ಇಂದಲ್ಲೇ ಶಬ್ದಾರ್ಥದ ಬದಲಾವಣೆಯ ಪ್ರಕ್ರಿಯೆಯನ್ನು ವ್ಯಕ್ತಿತ್ವದ ವಿಶಿಷ್ಟ ಗುಣಗಳನ್ನಾಗಿ ಸಮಗ್ರವಾಗಿ ಉಲ್ಲೇಖಿಸಿಲ್ಲ; ಆದರೆ ಇದರ ವಿವರಕ್ಕೆ, ಚರ್ಚಿನಲ್ಲಿ ಓದಬೇಕಾದದ್ದರಲ್ಲಿ ಮತ್ತು ಬೇರೆ ಇತರ ಸಾಹಿತ್ಯದಲ್ಲಿ ಇದರ ಬಗ್ಗೆ ಸಲಹೆ ಸೂಚನೆಯನ್ನು ತೆಗೆದುಕೊಳ್ಳಲಾಗಿದೆ. ಡಾಂಟೆಯ ಡಿವೈನ್ ಕಾಮಿಡಿ ಯ IIನೇ ಭಾಗ ಪುರ್ಗಾಟೋರಿಯೋ ವು ಪುನರುಜ್ಜೀವನದ ನಂತರ ಇದಕ್ಕೆ ಒಳ್ಳೆ ಮೂಲವೆನ್ನಲಾಗಿದೆ.

ಆಧುನಿಕ ರೋಮನ್ ಕ್ಯಾಥೋಲಿಕ್‌ನ ಪ್ರಶ್ನೋತ್ತರ ಬೋಧೆಯ ಪಟ್ಟಿಯಲ್ಲಿ ಪಾಪಗಳನ್ನು ಈ ರೀತಿ ಪಟ್ಟಿ ಮಾಡಲಾಗಿದೆ : "ಅಹಂಕಾರ, ದುರಶೆ, ಕಡುಕೋಪ, ಹೊಟ್ಟೆಬಾಕತನ, ಮತ್ತು ಸೋಮಾರಿತನ/ಅಸೀಡಿಯಾ ".[] ಏಳು ಪ್ರಾಣಾಂತಿಕ ಪಾಪಗಳಲ್ಲಿ ಪ್ರತಿಯೊಂದು ಪಾಪಕ್ಕೂ ಸಮಾನ ವಿರುದ್ಧಾರ್ಥದ ಪುಣ್ಯವಿರುತ್ತದೆ ಅದನ್ನು ಏಳು ಪುಣ್ಯ ಸದ್ಗುಣಗಳು ಎಂದು ಕರೆಯಲಾಗುತ್ತದೆ (ಕೆಲವೊಮ್ಮೆ ಇದನ್ನು ಪ್ರತಿ ಸದ್ಗುಣಗಳು ಎಂದೂ ಕರೆಯಲಾಗುತ್ತದೆ). ಪಾಪಗಳನ್ನು ವಿರೋಧಿಸುವ ಈ ಏಳು ಸದ್ಗುಣಗಳು ಕ್ರಮವಾಗಿ ಹೀಗಿರುತ್ತದೆ ವಿನಮ್ರತೆ, ಧರ್ಮಕಾರ್ಯ, ಕರುಣೆ, ತಾಳ್ಮೆ, ಕನ್ಯಾತ್ವ ಅಥವಾ ಬ್ರಹ್ಮಚರ್ಯ, ಆತ್ಮ ಸಂಯಮ, ಮತ್ತು ಶ್ರಮಶೀಲತೆ.

ಏಳು ಪ್ರಾಣಾಂತಿಕ ಪಾಪಗಳ ಚಾರಿತ್ರಿಕ ಮತ್ತು ಆಧುನಿಕ ವ್ಯಾಖ್ಯಾನಗಳು

ಬದಲಾಯಿಸಿ

ದುಂದುಗಾರಿಕೆ

ಬದಲಾಯಿಸಿ

ದುಂದುಗಾರಿಕೆ (ಲ್ಯಾಟಿನ್, [luxuria] Error: {{Lang}}: text has italic markup (help)) ಅತಿಯಾದ ಅನಿರೋಧಕ. ದುಂದುಗಾರಿಕೆ ಎಂದರೆ ದುಬಾರಿ ಬೆಲೆಯ ಸಾಮಾನುಗಳು ಖರೀದಿಸುವ ಸ್ವಭಾವ ಮತ್ತು ಕಚ್ಚೆಹರಕುತನ.

ಪ್ರಣಯದ ಭಾಷೆಗಳಲ್ಲಿ, ಲ್ಯಾಟಿನ್ ಭಾಷೆಯ ಪಾಪಕ್ಕೆ ಅರ್ಥವಿರುವ ಲಕ್ಸ್‌ಜ್ಯೂರಿಯಾ ಯಾದ ಸಜಾತೀ ಪದವು ಲೈಂಗಿಕ ಅರ್ಥವಾಗಿ ಹೊರಹೊಮ್ಮಿದೆ; ಹಳೆಯ ಫ್ರೆಂಚ್ ಸಜಾತಿ ಪದವು ಇಂಗ್ಲೀಷ್ ಭಾಷೆಯಲ್ಲಿ ಲಕ್ಸೂರಿ ಯಾಗಿ ಸ್ವೀಕೃತವಾಗಿದೆ ಆದರೆ 14ನೇ ಶತಮಾನದಷ್ಟು ಹೊತ್ತಿಗೆ ಅದರ ಲೈಂಗಿಕ ಅರ್ಥ ಕಳೆದುಹೋಯಿತು.[]

ಸಂಭೋಗಾಕಾಂಕ್ಷೆ

ಬದಲಾಯಿಸಿ

ಸಂಭೋಗಾಕಾಂಕ್ಷೆ ಅಥವಾ ಕಚ್ಚೆಹರಕುತನ ಎಂಬುದು ಲೈಂಗಿಕವಾಗಿ ಅತಿಯಾಗಿ ಆಲೋಚಿಸುವುವ ಅಥವಾ ಆಸೆ ಪಡುವ ಪ್ರಕೃತಿ. ಆರಿಸ್ಟೋಟಲ್‌ನ ಮಾನದಂಡದ ಪ್ರಕಾರ ಅನ್ಯರ ಬಗೆಗಿನ ಅತಿಯಾದ ಪ್ರೀತಿ ,ಪರೋಕ್ಷವಾಗಿ ದೇವರಿಗೆ ಪ್ರೀತಿ ಮತ್ತು ಭಕ್ತಿಯನ್ನು ಅರ್ಪಿಸಿದಂತೆ. ಡಾಂಟೆಯ ಪುರ್ಗಾಟೋರಿಯೋ ದಲ್ಲಿ ಕಾಮ/ಲೈಂಗಿಕ ಚಿಂತನೆ ಮತ್ತು ಭಾವನೆಗಳನ್ನು ಹೊಂದಿರುವವನು ಪಶ್ಚಾತ್ತಾಪ ಪಟ್ಟಲ್ಲಿ ಉರಿವ ಜ್ವಾಲೆಯೊಳಗೆ ನಡೆಯುತ್ತಾನೆ. ಡಾಂಟೆಯ "ನರಕ"ದಲ್ಲಿ ಕ್ಷಮೆ ಸಿಗದ ಕಾಮದ ಪಾಪಿಗಳ ಆತ್ಮಗಳನ್ನು ಚಂಡಮಾರುತದಲ್ಲಿ ಸಿಕ್ಕಿಸಲಾಗುತ್ತದೆ. ಚಂಡಮಾರುತಕ್ಕೆ ಸಿಲುಕಿದ ಆತ್ಮಗಳು ನೆಮ್ಮದಿ ಇಲ್ಲದೆ, ನೆಲೆ ಸಿಗದೆ ಹೇಗೆ ಹಾರಾಡುತ್ತಿರುತ್ತವೋ ಅದು ಭೂಮಿಯ ಮೇಲೆ ಆ ಆತ್ಮಗಳು ಮನಸ್ಸಿಗೆ ಕಡಿವಾಣವಿಲ್ಲದೆ ಕಾಮಕ್ಕೇಳಿ ಆಡಿದ ಸಂಕೇತವಾಗಿ ಈ ಶಿಕ್ಷೆ ಎನ್ನಲಾಗಿದೆ.

ಹೊಟ್ಟೆಬಾಕತನ

ಬದಲಾಯಿಸಿ
 
"ಎಕ್ಸೆಸ್"(ಆಲ್ಬರ್ಟ್ ಆಂಕರ್, 1896)

ಲ್ಯಾಟಿನ್‌ನ ಗ್ಲಟೈರ್ ನಿಂದ ಬಂದಂತಹ ಶಬ್ದ, ನುಂಗುವುದು ಹೊಟ್ಟೆಬಾಕತನ ಎಂಬ ಅರ್ಥ ಹೊಂದಿದೆ,(ಲ್ಯಾಟಿನ್ ಭಾಷೆಯಲ್ಲಿ, [gula] Error: {{Lang}}: text has italic markup (help)) ಯಾವುದಾದರೊಂದನ್ನು ವ್ಯರ್ಥ ಎನ್ನುವಷ್ಟು ಎಂದರೆ ಆತಿಯಾದ ಇಚ್ಛಾಪೂರೈಕೆ ಮತ್ತು ಅತಿಯಾದ-ಸೇವನೆ. ಕ್ರೈಸ್ತ ಧರ್ಮದಲ್ಲಿ ಅತಿಯಾಗಿ ತಿನ್ನುವುದು ಅಥವಾ ಹಸಿದವರ ಊಟವನ್ನು ಹಿಡಿದಿಟ್ಟುಕೊಳ್ಳುವುದು ಪಾಪ ಕೃತ್ಯ.[]

ಅವಗುಣ ಅಥವಾ ಅಂತಸ್ತು ಎಂದು ಕಾಣುವುದು ಆಯಾ ಸಂಸ್ಕೃತಿ ಮೇಲೆ ಅವಲಂಬಿಸಿರುತ್ತದೆ. ಎಲ್ಲಿ ಆಹಾರದ ಲಭ್ಯತೆಯಲ್ಲಿ ಕೊರತೆಯಿರುತ್ತದೋ ಅಲ್ಲಿ ಅಗತ್ಯಕ್ಕಿಂತ ಹೆಚ್ಚು ತಿನ್ನುವುದು ಅಹಂಕಾರವಾಗುತ್ತದೆ. ಎಲ್ಲಿ ಆಹಾರ ಹೇರಳವಾಗಿದೆಯೋ ಅಲ್ಲಿ ಅಗತ್ಯಕ್ಕಿಂತ ಹೆಚ್ಚು ಸೇವಿಸುವುದರಿಂದ ನಮ್ಮ ಮನಸ್ಸಿನ ಹತೋಟಿ ಎಷ್ಟಿದೆ ಎಂಬುದನ್ನು ಪ್ರತಿಬಿಂಬಿವಾಗುತ್ತದೆ.ಮಧ್ಯಕಾಲೀನ ಚರ್ಚ್‌ನ ನಾಯಕರಾದ (ಉದಾ., ಥಾಮಸ್ ಅಕ್ವಿನಾಸ್) ಹೊಟ್ಟೆಬಾಕತನಕ್ಕೆ ವಿಶಾಲ ದೃಷ್ಟಿಯನ್ನು ಕೊಟ್ಟರು,[] ಅದು ಊಟ ಎದುರು ನೋಡುವುದು,ಊಟದ ಗೀಳನ್ನು ಇಟ್ಟುಕೊಳ್ಳುವುದು ಮತ್ತು ಪದೇ ಪದೇ ರುಚಿಕರವಾದ ಹಾಗೂ ದುಬಾರಿ ಊಟವನ್ನು ತಿನ್ನುವುದು ಎಂದು ವಾದವನ್ನು ಮಾಡಿದರು.[] ಅಕ್ವಿನಾಸ್ ಹೊಟ್ಟೆಬಾಕತನಕ್ಕೆ ಆರು ದಾರಿಯನ್ನು ವ್ಯಾಖ್ಯಾನಿಸುವಷ್ಟು ಮುಂದುವರೆದನು, ಆ ಆರು ದಾರಿಗಳ ಪಟ್ಟಿ ಹೀಗಿದೆ:

  • ಪ್ರೇಪ್ರಾಪೀರ್ - ಅತೀ ಶೀಘ್ರವಾಗಿ ತಿನ್ನುವುದು.
  • ಲೌಟೆ - ಅತೀ ದುಬಾರಿ ಆಹಾರವನ್ನು ತಿನ್ನುವುದು.
  • ನಿಮಿಸ್ - ಅತಿಯಾಗಿ ತಿನ್ನುವುದು.
  • ಆರ್ಡೆಂಟರ್ - ಆತುರಾತುರವಾಗಿ ತಿನ್ನುವುದು (ಚುರುಕಾಗಿ).
  • ಸ್ಟುಡಿಯೋಸೆ - ಅಚ್ಚುಕಟ್ಟಾಗಿ (ಉತ್ಸಾಹಿಕವಾಗಿ) ತಿನ್ನುವುದು.
  • ಫೋರೆಂಟೆ - ಹುಚ್ಚುಚ್ಚಾಗಿ ತಿನ್ನುವುದು (ಬೇಸರವಾಗುವಷ್ಟು).

ದುರಾಶೆ

ಬದಲಾಯಿಸಿ

ದುರಾಶೆ (ಲ್ಯಾಟಿನ್ ಭಾಷೆಯಲ್ಲಿ, [avaritia] Error: {{Lang}}: text has italic markup (help)) ಎಂದೂ ಹೇಳಲಾಗುವ ಹಣದಾಶೆ ಅಥವಾ ಲೋಭ ವೂ ಕಾಮ ಮತ್ತು ಹೊಟ್ಟೆಬಾಕತನದಷ್ಟೇ ಅಧಿಕ ಪಾಪ ಕಾರ್ಯ. ಆದಾಗ್ಯೂ, ಚರ್ಚ್‌ನವರು ಕಂಡಂತೆ ಹಣದಾಶೆ ಎಂಬುದು ಅತಿ ಹೆಚ್ಚು ಆಸೆ ಪಡುವುದು ಮತ್ತು ಆಸ್ತಿ, ಅಂತಸ್ತು, ಮತ್ತು ಅಧಿಕಾರಕ್ಕಾಗಿ ಬೆಂಬತ್ತಿ ಹೋಗುವುದು. ಸಂತ. ಥಾಮಸ್ ಅಕ್ವಿನಾಸ್ ಬರೆಯುವಂತೆ, "ಅತಿಯಾದ ಹಣದಾಸೆಯು ಕೂಡ, ಬೇರೆಲ್ಲಾ ಮಾರಕವಾದ ಪಾಪಗಳಂತೆ ಮತ್ತು ಮನುಷ್ಯ ಕ್ಷಣಿಕ ಸುಖಕ್ಕಾಗಿ ಶಾಶ್ವತವಾದದ್ದನ್ನು ತೆಗಳುವಂತೆ, ದೇವರ ವಿರುದ್ಧವಾದದ್ದು". ಡಾಂಟೆಯ ಶುದ್ಧೀಕರಣದ ಪ್ರಕಾರ, ಪಶ್ಚಾತ್ತಾಪ ಪಡುವವರು ಅಥವಾ ಮರುಗುವವರು ತಾವು ಭೂಮಿಯ ಮೇಲೆ ಐಹಿಕ ಸುಖದ ಮೇಲೆ ತುಂಬಾನೆ ಮನಸನ್ನು ಕೇಂದ್ರೀಕರಿಸಿದ್ದರಿಂದ ಅದರ ಸಂಕೇತವಾಗಿ ತಮ್ಮ ಮುಖವನ್ನು ಕೆಳ ಮಾಡುವುದಾಗಿದೆ. "ದುರಾಶೆ" ಎಂಬುದು ಬೇರೆ ರೀತಿಯ ಅತಿಯಾಶೆಗೂ ಬಳಸುವ ಸರ್ವೇಸಾಮಾನ್ಯವಾದ ಪದ. ಇವುಗಳಲ್ಲಿ, ವಿಶೇಷವಾಗಿ ವೈಯಕ್ತಿಕ ಲಾಭಕ್ಕಾಗಿ ಮಾಡುವ ನಂಬಿಕೆದ್ರೋಹ, ಉದ್ದೇಶಪೂರ್ವಕ ನಂಬಿಕೆ ದ್ರೋಹ, ಅಥವಾ ಸ್ವಾಮಿದ್ರೋಹ,[ಸೂಕ್ತ ಉಲ್ಲೇಖನ ಬೇಕು] ಸೇರಿರುತ್ತದೆ, ಉದಾಹರಣೆಗೆ ಲಂಚ {{citation}}: Empty citation (help). ವಸ್ತುಗಳನ್ನು ಶುಚಿಮಾಡುವುದು[ಸೂಕ್ತ ಉಲ್ಲೇಖನ ಬೇಕು] ಮತ್ತು ಸಂಗ್ರಹಿಸುವುದು, ಕಳ್ಳತನ ಮತ್ತು ದರೋಡೆ ಮಾಡುವುದು ವಿಶೇಷವಾಗಿ ದೌರ್ಜನ್ಯದಿಂದ, ಕುಯುಕ್ತಿಯಿಂದ, ಅಥವಾ ಅಧಿಕಾರಶಾಹಿ ಕುತಂತ್ರದಿಂದ ಮಾಡಲು ಹವಣಿಸುವುದು ಎಲ್ಲವೂ ಹಣದಾಹದ ಸ್ಫೂರ್ತಿಯಿಂದಲ್ಲೇ ಪಡೆದಂತಹವು. ಇಂಥ ದುಷ್ಕಾರ್ಯಗಳಲ್ಲಿ ಧರ್ಮಾಧಿಕಾರದ ಮಾರಾಟವೂ ಸೇರಿರುತ್ತದೆ, ಅಂದರೆ ಚರ್ಚ್‌ಗೆ ಸೇರಿದ ವಸ್ತುಗಳಿಂದ ಲಾಭ ಮಾಡಿಕೊಳ್ಳುವುದೂ ಇದರಲ್ಲಿ ಒಂದು.

ಅಸೀಡಿಯಾ

ಬದಲಾಯಿಸಿ

ಅಸೀಡಿಯಾ (ಲ್ಯಾಟಿನ್ ಭಾಷೆಯಲ್ಲಿ, [acedia] Error: {{Lang}}: text has italic markup (help)) (ಗ್ರೀಕನಿಂದ ακηδία) ಅಂದರೆ ಯಾರಾದರು ತಮ್ಮ ಬೇಜವಾಬ್ದಾರಿಯಿಂದ ತಮ್ಮ ಕರ್ತವ್ಯವನ್ನು ನಿರ್ವಹಣೆ ಮಾಡದಿರುವುದು. ಇದು ನಿರಾಸಕ್ತ ಜಡತ್ವಕ್ಕೆ ಭಾಷಾಂತರವಾಗಿರುತ್ತದೆ; ಸಂತೋಷವಿಲ್ಲದ ದನಿಗುಂದಿದ ಸ್ಥಿತಿ. ಇದು ಖಿನ್ನತೆ ಯ ರೀತಿ ಇರುತ್ತದೆ, ಆದಾಗ್ಯೂ ಅಸೀಡಿಯಾ ಸ್ವಭಾವವನ್ನು ವಿವರಿಸಿದರೆ, ಖಿನ್ನತೆ ಯು ಆವೇಗ ಉತ್ಪಾದಿಸುವುದನ್ನು ಸೂಚಿಸುತ್ತದೆ. ಕ್ರಿಶ್ಚೀಯನ್ ಆರಂಭದ ಕಾಲದಲ್ಲಿ ಸಂತೋಷಪಡುವುದರಲ್ಲಿರುವ ಮನೋಭಾವದ ಕೊರತೆಯನ್ನು, ದೇವರ ಸೃಷ್ಟಿಯನ್ನು ಮತ್ತು ಒಳ್ಳೆಯತನವನ್ನು ಉದ್ದೇಶಪೂರ್ವಕವಾಗಿ ಗಮನಿಸಲು ನಿರಾಕರಿಸಿದಂತೆಯೇ ಎನ್ನಲಾಗಿದೆ; ಪ್ರತಿಯಾಗಿ, ಜಡತೆಯು ಜನರನ್ನು ಧಾರ್ಮಿಕ ಕಾರ್ಯಗಳಿಂದ ದೂರವುಳಿಸುವ ಆಧ್ಯಾತ್ಮಿಕ ಹಿಂಸೆ ಎಂದು ಪರಿಗಣಿಸಲಾಗಿದೆ.ಥಾಮಸ್ ಅಕ್ವಿನಾಸ್ ತನ್ನ ವ್ಯಾಖ್ಯಾನದ ಪಟ್ಟಿಯಲ್ಲಿ ಅಸೀಡಿಯಾ ವನ್ನು ಮನಸ್ಸಿನ ಅಶಾಂತಿ ಎಂದು ವಿವರಿಸಿದ್ದಾನೆ. ಅಶಾಂತಿ ಮತ್ತು ಅಸ್ಥಿರತೆಯಂಥ ಕಡಿಮೆ ಪಾಪಗಳ ಪ್ರಜನಕವೆಂದು ಹೇಳಿದ್ದಾನೆ. ಡಾಂಟೆ ಈ ಅರ್ಥ ವಿವರಣೆಯನ್ನು ಇನ್ನಷ್ಟು ಸಂಸ್ಕರಿಸಿ ಅಸೀಡಿಯಾವನ್ನು ಪೂರ್ಣ ಮನಸ್ಸಿನಿಂದ, ಪೂರ್ಣ ಹೃದಯದಿಂದ, ಪೂರ್ಣ ಆತ್ಮದಿಂದ ದೇವರನ್ನು ಪ್ರೀತಿಸುವುದರಲ್ಲಿ ಸೋಲು ಎಂದಿದ್ದಾನೆ ; ಡಾಂಟೆಗೆ ಇದೊಂದು ಮಧ್ಯಮ ಗತಿಯ ಪಾಪ , ಪ್ರೀತಿಯಿಲ್ಲದಿರುವುದು ಅಥವಾ ಅರೆ ಪ್ರೀತಿಯಿರುವುದು ಇದಕ್ಕೆ ಕಾರಣ.

ಹತಾಶೆ ಅಥವಾ ನಿರಾಶೆ

ಬದಲಾಯಿಸಿ

ಹತಾಶೆ ಅಥವಾ ನಿರಾಶೆ (ಲ್ಯಾಟಿನ್ ಭಾಷೆಯಲ್ಲಿ, [Tristitia] Error: {{Lang}}: text has italic markup (help)) ವಿವರಿಸಿದಂತೆ ಇದೊಂದು ಅತೃಪ್ತಿಯ ಭಾವನೆ ಅಥವಾ ಅಸಮಾಧಾನ, ಪ್ರಸ್ತುತ ಸಂದರ್ಭಕ್ಕೆ ಅಸಂತೋಷವನ್ನುಂಟು ಮಾಡುತ್ತದೆ, ವಿಶೇಷವಾಗಿ ಆಲೋಚನೆಗಳಲ್ಲಿ ಹತಾಶ ಸ್ಥಿತಿಯನ್ನುಂಟು ಮಾಡುತ್ತದೆ. ಅಸಂತೋಷವು ಪಾಪಗಳಲ್ಲಿ ಅಂತರ್ಗತವಾಗಿರುವುದರಿಂದ, ಪಾಪವನ್ನು ದು:ಖ ವೆಂದು ಉಲ್ಲೇಖಿಸಲಾಗುತ್ತದೆ. ದು:ಖವು ಅಸೀಡಿಯಾಕ್ಕೆ ಆಗಾಗ್ಗೆ ಪರಿಣಮಿಸುವುದರಿಂದ, ಪೋಪ್ ಗ್ರಿಗೋರಿಯ ಪರಿಷ್ಕರಿಸಿದ ಪಟ್ಟಿಯಲ್ಲಿ ಹತಾಶೆ ಯನ್ನು ಅಸೀಡಿಯಾ ದಲ್ಲಿ ಅಂತರ್ಗತಗೊಳಿಸಲಾಗಿದೆ.

ಸೋಮಾರಿತನ ಅಥವಾ ಆಲಸ್ಯ

ಬದಲಾಯಿಸಿ

ಕ್ರಮೇಣವಾಗಿ, ಅಸೀಡಿಯಾದ ಕಾರಣಕ್ಕಿಂತ ಅದರ ಪರಿಣಾಮದ ಮೇಲೆ ಕೇಂದ್ರೀಕರಿಸುವಂತಾಯಿತು, 17ನೇ ಶತಮಾನದಷ್ಟು ಹೊತ್ತಿಗೆ, ಉಲ್ಲೇಖಿಸಿರುವ ಖಚಿತವಾದ ಪ್ರಾಣಾಂತಿಕ ಪಾಪ ವನ್ನು ಒಬ್ಬನ ಪ್ರತಿಭೆಯನ್ನು ಬಳಸಿಕೊಳ್ಳುವಲ್ಲಿ ಸಾಧ್ಯವಾಗುತ್ತಿರಲಿಲ್ಲ ಸೋಲುಂಟಾಗುತ್ತಿತ್ತು. [ಸೂಕ್ತ ಉಲ್ಲೇಖನ ಬೇಕು]ಪದ್ಧತಿಯಲ್ಲಿ ಅದು ಅಸೀಡಿಯಾಗಿಂತ ಸೋಮಾರಿತನ ಅಥವಾ ಆಲಸ್ಯ (ಲ್ಯಾಟಿನ್ ಭಾಷೆಯಲ್ಲಿ, [Socordia] Error: {{Lang}}: text has italic markup (help))ಕ್ಕೆ ಹತ್ತಿರ ಬಂತು. ಡಾಂಟೆಯ ಕಾಲದಲ್ಲೂ ಈ ಬದಲಾವಣೆಯ ಚಿಹ್ನೆ ಕಾಣಿಸಿಕೊಂಡಿತು; ಪುರ್ಗಾಟೋರಿಯೋ ದಲ್ಲಿ ಡಾಂಟೆ ಅಸೀಡಿಯಾದ ಪಾಪನಿವೇದನೆಯನ್ನು ಅತಿವೇಗದಲ್ಲಿ ಸತತವಾಗಿ ಓಡುವುದು ಎಂಬುದಾಗಿ ಚಿತ್ರಿಸಿದ.ಆಧುನಿಕ ದೃಷ್ಟಿಕೋನವು ಇನ್ನೂ ಮುಂದೆ ಹೋಗಿ ಸೋಮಾರಿತನ ಮತ್ತು ಭಿನ್ನಾಭಿಪ್ರಾಯ ಹೃದಯಕ್ಕೆ ಸಂಬಂದಿಸಿದ ಪಾಪ ದ ಸಂಗತಿಗಳೆಂದು ಹೇಳಿತು. ಭಿನ್ನವಾಗಿ, ಉದ್ದೇಶಪೂರ್ವಕ ಸೋಲಾಗಿ ಇದು ನಿಲ್ಲುವುದರಿಂದ ಉದಾಹರಣೆಗೆ ದೇವರನ್ನು ಮತ್ತು ಆತನ ಕೆಲಸವನ್ನು ಪ್ರೀತಿಸು ಎಂಬಂತೆ, ಸೋಮಾರಿತನವನ್ನು ಬೇರೆ ಪಾಪಗಳಿಗಿಂತ ಕಡಿಮೆ ಗಂಭೀರವಾಗಿ ಪರಿಗಣಿಸಲಾಗುತ್ತದೆ,ಪ್ರಾತಿನಿಧ್ಯ ಪಾಪ ಎನ್ನುವುದಕ್ಕಿಂತ ಲೋಪವೆನ್ನಲಾಗಿದೆ.

ಕ್ರೋಧ (ಲ್ಯಾಟಿನ್ ಭಾಷೆಯಲ್ಲಿ, [ira] Error: {{Lang}}: text has italic markup (help)), ಕೋಪ ಅಥವಾ "ಕ್ರೋಧಾವೇಶ"ವನ್ನು ಆತಿರೇಕದ ಮತ್ತು ಅನಿಯಂತ್ರಣ ಸಿಟ್ಟಿನ ಭಾವನೆಗಳು ಎನ್ನಲಾಗಿದೆ. ಈ ಭಾವನೆಗಳು ಸತ್ಯನಿರಾಕರಣೆ ಆದಾಗ ಪ್ರಕಟವಾಗುವಂತಹುದು, ಇದು ಅನ್ಯರ ಮೇಲೂ ಪ್ರಕಟವಾಗಬಹುದು ಮತ್ತು ಸ್ವಯಂ-ನಿರಾಕರಣೆ ಆಗಿಯೂ ಇರಬಹುದು, ಕಾನೂನಿನ ಪದ್ಧತಿಯಲ್ಲಿ ಅಸಹನೆವುಳ್ಳವನಾಗಿ, ಕಾನೂನಿನ ಪರಿಧಿಯ ಆಚೆ ಸೇಡು ತೀರಿಸಿಕೊಳ್ಳುವ ಅಪೇಕ್ಷೆಯುಳ್ಳವನಾಗಿಯೂ ಇರಬಹುದು (ಎಡೆ ಬಿಡದೆ ಕಾವಲು ಇದ್ದು ಸೇಡಿಗಾಗಿ ಕಾಯುತ್ತಿರುವಂತಹುದು) ಮತ್ತು ಸಾಮಾನ್ಯವಾಗಿ ಅನ್ಯರಿಗೆ ಕೆಡುಕನ್ನು ಮಾಡಲು ಅಪೇಕ್ಷಿಸುವುದು. ಪ್ರತೀಕಾರದಿಂದ ಹುಟ್ಟುವ ಉಲ್ಲಂಘನೆ ಭಾವನೆಯು ಅತ್ಯಂತ ಗಂಭೀರವಾದ ಅಂದರೆ ಕೊಲೆ, ಹಲ್ಲೆ, ಜನ ಹತ್ಯೆಯಂಥ ತೀವ್ರ ಕಾರ್ಯಗಳಿಗೆ ಆಸ್ಪದವಾಗಿ ಬಿಡುತ್ತದೆ. ಕೋಪ ಒಂದೇ ಪಾಪ ಕಾರ್ಯ ’ಸ್ವಾರ್ಥದ’ ಜೊತೆಯಿಲ್ಲದಿರುವುದು (ಆದಾಗ್ಯೂ ಯಾರೊಬ್ಬರು ಸ್ವಾರ್ಥದ ಕಾರಣಗಳಿಗೆ ಸಿಟ್ಟುಗೊಳ್ಳಬಹುದು, ’ಅಸೂಯೆ’ ಪಾಪದ ಹತ್ತಿರದ ನಂಟಿನದು). ಡಾಂಟೆ, ಪ್ರತೀಕಾರ ಅಥವಾ ಸೇಡನ್ನು "ನ್ಯಾಯ ಶೀಲ ವರ್ತನೆ ಬಗೆಗಿನ ಪ್ರೀತಿ ಅಡ್ಡದಾರಿ ಹಿಡಿದಾಗ ಸೇಡು ಮತ್ತು ವೈರತ್ವವಾಗುತ್ತದೆ" ಎಂದು ವಿವರಿಸಿದ್ದಾನೆ. ಮೂಲ ರೂಪದಲ್ಲಿ ’ಕ್ರೋಧ’ ಪಾಪವು ಬಹಿರಂಗಕ್ಕಿಂತ ಆಂತರಿಕವಾಗಿ ಕೋಪದೊಡನೆ ಸುತ್ತುವರಿದಿರುತ್ತದೆ. ಆದ್ದರಿಂದ ಆತ್ಮಹತ್ಯೆ ಅಂತಿಮ, ಪ್ರಯತ್ನಿಸಿದ ದುರಂತ, ಒಳಾಂತರಾಳದಲ್ಲಿ ಇಳಿದ ಕ್ರೋಧ,ದೇವರ ಕೊಡುಗೆ (ಬದುಕಿನ) ನಿರಾಕರಣೆ.

ದುರಾಶೆಯಂತೆ, ಅಸೂಯೆ (ಲ್ಯಾಟೀನ್, [invidia] Error: {{Lang}}: text has italic markup (help)) ತಣಿಸಲಾಗದ ಆಸೆ ಎಂದು ಚಿತ್ರಿಸಬಹುದಾಗಿದೆ; ಆದರೂ ಎರಡು ಕಾರಣಗಳಿಂದಾಗಿ ಅವು ಒಂದಕ್ಕೊಂದು ಭಿನ್ನವೆನ್ನಬಹುದು. ಮೊದಲಿಗೆ ದುರಾಶೆ ಭೌತಿಕ ವಸ್ತುಗಳೊಡನೆ ಇರುತ್ತಿತ್ತು, ಅಸೂಯೆ ಎಂಬುದು ಸಾಮಾನ್ಯ ಅರ್ಥದಲ್ಲಿ ಅನ್ವಯವಾಗುತ್ತಿತ್ತು. ಎರಡನೆಯದಾಗಿ, ಅಸೂಯೆ ಎಂಬ ಪಾಪವನ್ನು ಮಾಡುವವರು ಅನ್ಯರಿಗೆ ಇರುವುದು ತಮಗಿಲ್ಲವೆಂದು ಅರಿವಾದಾಗ ಅನ್ಯರಿಗಿರುವ ಅಸೂಯೆಗೆ ಕಾರಣವಾಗಿರುವುದು ಅವರಿಂದ ಕಸಿದುಹೋಗಲಿ ಎಂದು ಬಯಸುತ್ತಾರೆ. ಡಾಂಟೆ ಆ ಆಸೆಯನ್ನು ವಿವಿರಿಸುತ್ತ ಅನ್ಯರ ಬಳಿಗಿರುವುದು ಯಾರಾದರೂ ಕಿತ್ತುಕೊಳ್ಳಲಿ ಎಂದೂ ಅಪೇಕ್ಷಿಸುತ್ತಾರೆ ಎಂದಿದ್ದಾನೆ." ಡಾಂಟೆಯ ಶುದ್ಧೀಕರಣದ ಪ್ರಕಾರ ಯಾರು ಅಸೂಯೆ ಪಡುತ್ತಾರೋ ಅವರ ಕಣ್ಣುಗಳನ್ನು ತಂತಿಯಿಂದ ಹೊಲಿಗೆ ಹೆಣೆದು ಮುಚ್ಚಿ ಬಿಡಬೇಕೆನ್ನುತ್ತಾನೆ ಕಾರಣ ಕಣ್ಣುಗಳೇ ಅವರನ್ನು ಅನ್ಯರನ್ನು ನೋಡಿ ಅಸೂಯೆ ಪಡಲು ಅವಕಾಶವಾಗಿರುವುದು. ಅಕ್ವಿನಾಸ್ ಅಸೂಯೆಯನ್ನು ವಿವರಿಸುತ್ತಾ "ಇನೊಬ್ಬರ ಒಳಿತು ಕೊಡುವ ದು:ಖ" ಎಂದು ಹೇಳಿದ್ದಾನೆ, ಅತಿ ಉದ್ದ ಶಿಶ್ನವಿರುವ ಪುರುಷರನ್ನು ನೋಡಿ ಕೆಲ ಪುರುಷರು ಹೀಗೆಯೇ ಅಸೂಯೆ ಪಡುವುದು ಎಂದೂ ನಂಬಲಾಗಿದೆ..[]

ಅಹಂಕಾರ ಅಥವಾ ಜಂಬ

ಬದಲಾಯಿಸಿ

ಪಾಪಗಳ ಯಾವುದೇ ಪಟ್ಟಿಯಲ್ಲಿ ಅಹಂಕಾರ ಅಥವಾ ಜಂಬ (ಲ್ಯಾಟೀನ್, [superbia] Error: {{Lang}}: text has italic markup (help)), ಅಥವಾ ದುರಹಂಕಾರ ವನ್ನು ಬೇರೆಲ್ಲಾ ಪಾಪಗಳ ಮೂಲವೆಂದು ಮತ್ತು ಏಳು ಪ್ರಾಣಾಂತಿಕ ಪಾಪಗಳಲ್ಲಿ ಇದು ಅತ್ಯಂತ ಗಂಭೀರವಾದ ಪಾಪವೆಂದು ಪರಿಗಣಿಸಲಾಗಿದೆ. ಈ ಪಾಪ ಕ್ರಿಯೆಯಲ್ಲಿ ತಾವು ಅನ್ಯರಿಗಿಂತ ಮುಖ್ಯಸ್ಥರಾಗಬೇಕು ಅಥವಾ ಆಕರ್ಷಿತರಾಗಬೇಕು ಎಂದು ಅಂದುಕೊಳ್ಳುವುದಲ್ಲದೇ ಬೇರೆಯವರ ಉತ್ತಮ ಕೆಲಸಗಳನ್ನೂ ಗುರುತಿಸಲು ಮನಸ್ಸಾಗುವುದಿಲ್ಲ, ಆನಂತರ ಸ್ವರತಿ ತುಂಬಾನೆ ಅಧಿಕವಾಗಿರುತ್ತದೆ ಜೊತೆಗೆ ದೇವರೊಡನೆಯೂ ನಿರ್ದಿಷ್ಟ ಭಕ್ತಿಯನ್ನು ಇಟ್ಟುಕೊಂಡಿರುವುದಿಲ್ಲ. ಅಹಂಕಾರದ ಬಗ್ಗೆ ಡಾಂಟೆಯ ವಿವರಣೆ ಹೀಗಿದೆ, "ವಿಕೃತದಿಂದ ವೈರದವರೆಗೂ ತನ್ನೊಳಗಿರುವ ಯಾವುದೇ ಭಾವನೆಯನ್ನು ತಾನು ಇಷ್ಟಪಡುವುದು ಮತ್ತು ನೆರೆಹೊರೆಯ ಬಗೆಗಿನ ತಿರಸ್ಕಾರ ಹೊಂದಿರುವುದು." ಜಾಕಬ್ ಬಿಡ್ಡರ್‌ಮನ್‌ರವರ ಮಧ್ಯಕಾಲೀನ ಅಲೌಕಿಕ ನಾಟಕ, ಸಿನೋಡಾಕ್ಸಸ್ ನಲ್ಲಿ ಅಹಂಕಾರ ಎಲ್ಲಾ ಪಾಪಗಳಿಗಿಂತ ಕಡೆಯಾದದ್ದೆಂದು ಮತ್ತು ಪಾರ್ಸೀಯನ್ ವೈದ್ಯನೊಬ್ಬನು ನೇರವಾಗಿ ನರಕಕ್ಕೆ ಬೀಳುವುದನ್ನು ಚಿತ್ರೀಸಿದೆ. ಅಹಂಕಾರ ಮನುಷ್ಯನನ್ನು ಹಾಳು ಮಾಡುವುದರ ಬಗ್ಗೆ ಇರುವ ಅತ್ಯುತ್ತಮ ಉದಾಹರಣೆಗಳಲ್ಲಿ ಲ್ಯೂಸಿಫರ್ ಒಂದು, ಅಹಂಕಾರ ಅವನನ್ನು ದೇವರೊಡನೆಯೂ ಸ್ಪರ್ಧೆಗಿಳಿವಂತೆ ಮಾಡುತ್ತದೆ ಪರಿಣಾಮವಾಗಿ ಸ್ವರ್ಗದಿಂದ ನರಕಕ್ಕಿಳಿದು ಸೈತಾನನಾಗಿ ಪರಿವರ್ತನೆಗೊಳ್ಳಬೇಕಾಯಿತು. ಡಾಂಟೆಯ ಡಿವೈನ್ ಕಾಮಿಡಿ ಯಲ್ಲಿ, ಪಶ್ಚಾತ್ತಾಪ ಪಡುವವರನ್ನು ಬಲವಂತವಾಗಿ ಅವರ ಬೆನ್ನಿನ ಮೇಲೆ ಕಲ್ಲು ಚಪ್ಪಡಿಗಳನ್ನು ಹೊರಿಸುವದರ ಮೂಲಕ ಅವರಲ್ಲಿ ವಿನಯ, ವಿನಮ್ರತೆಯನ್ನು ಉಂಟುಮಾಡುವುದಾಗಿತ್ತು.

ಒಣಜಂಬ ಅಥವಾ ಬಂಡವಾಳವಿಲ್ಲದ ಬಡಾಯಿ

ಬದಲಾಯಿಸಿ

ಒಣಜಂಬ ಅಥವಾ ಬಂಡವಾಳವಿಲ್ಲದ ಬಡಾಯಿ (ಲ್ಯಾಟಿನ್, [vanagloria] Error: {{Lang}}: text has italic markup (help)) ಅಂದರೆ ಅಸಮರ್ಥನೀಯವಾದ ಬಡಾಯಿಕೊಚ್ಚಿಕೊಳ್ಳುವುದು. ಪೋಪ್ ಗ್ರಿಗೋರಿ ಒಣಜಂಬವನ್ನು ಅಹಂಕಾರ ಎಂದು ಕಂಡು ಪಾಪದ ಪಟ್ಟಿಯಲ್ಲಿ ಸೇರಿಸಿದನು.ಲ್ಯಾಟಿನ್ ಪದ ಗ್ಲೋರಿಯಾ ಅಂದರೆ ಬಡಾಯಿ ಕೊಚ್ಚಿಕೊಳ್ಳುವುದು ಎಂಬ ಅರ್ಥವಿತ್ತು, ಆದಾಗ್ಯೂ, ಇಂಗ್ಲೀಷ್‌ನಲ್ಲಿ - ಗ್ಲೋರಿ ಎಂಬುದು ಈಗ ಪ್ರತ್ಯೇಕ ಸಕಾರಾತ್ಮಕ ಅರ್ಥವನ್ನು ಹೊಂದಿದೆ; ಐತಿಹಾಸಿಕವಾಗಿ, ವೇಯ್ನ್ ಅಂದರೆ ಕೆಲಸಕ್ಕೆ ಬಾರದ ಅಥವಾ ನಿಷ್ಪ್ರಯೋಜಕ ಎಂದಾಗುತ್ತದೆ, ಆದರೆ 14ನೇ ಶತಮಾನದಷ್ಟು ಹೊತ್ತಿಗೆ ಬಲವಾದ ಆತ್ಮರತಿ ಅರ್ಥ ಅಂತರ್ಗತವಾಗಿದೆ, ಇದು ಅಸಮಂಜಸವಾಗಿದ್ದರೂ ಇಂದಿಗೂ ಅದೇ ಉಳಿದುಕೊಂಡಿದೆ.[೧೦] ಇದರ ಪರಿಣಾಮವಾಗಿ ಶಬ್ದಾರ್ಥಕ್ಕೆ ಸಂಬಂದ್ಧಿಸಿದ ಬದಲಾವಣೆಗಳು ಆಗಿ, ಒಣಜಂಬ ಪದದ ಬಳಕೆ ಅಪರೂಪವಾಗಿಬಿಟ್ಟಿದೆ ಮತ್ತು ಅದನ್ನು ಟೊಳ್ಳುತನ ಎಂದು ಸಾಮಾನ್ಯವಾಗಿ ಅಧುನಿಕ ಆತ್ಮರತಿಯ ಅರ್ಥದಲ್ಲಿ ಉಲ್ಲೇಖಿಸಲಾಗುತ್ತದೆ.

ಕ್ಯಾಥೋಲಿಕ್ ಸದ್ಗುಣಗಳು

ಬದಲಾಯಿಸಿ

ರೋಮನ್ ಕ್ಯಾಥೋಲಿಕ್ ಚರ್ಚ್ ನವರೂ ಕೂಡ ಏಳು ಸದ್ಗುಣಗಳನ್ನು ಪ್ರತಿಯೊಂದು ಏಳು ಪ್ರಾಣಾಂತಿಕ ಪಾಪಗಳಿಗೆ ವ್ಯತಿರಿಕ್ತವಾಗಿ ಪರಿಗಣಿಸುತ್ತದೆ.

ದುರ್ಗುಣ ಸದ್ಗುಣ
ಸಂಭೋಗಾಕಾಂಕ್ಷೆ ಬ್ರಹ್ಮಚರ್ಯ
ಹೊಟ್ಟೆಬಾಕತನ ಆತ್ಮಸಂಯಮ
ದುರಾಶೆ ಉದಾರತೆ
ಸೋಮಾರಿತನ ಶ್ರಮಶೀಲತೆ
ಕ್ರೋಧ ಸಂಯಮ
ಅಸೂಯೆ ಕರುಣೆ
ಅಹಂಕಾರ ವಿನಮ್ರತೆ

ರಾಕ್ಷಸರದೊಂದಿಗಿನ ಸಹವಾಸ

ಬದಲಾಯಿಸಿ

1589ರಲ್ಲಿ ಪೀಟರ್ ಬಿನ್ಸ್‌ಫೆಳ್ಡ್ ಪ್ರತಿಯೊಂದು ಪ್ರಾಣಾಂತಿಕ ಪಾಪಗಳ ಜೊತೆ ಉದ್ರೇಕಗೊಳಿಸುವ ಒಂದು ರಾಕ್ಷಸನನ್ನು ಜೊತೆ ಮಾಡಿದ. ಬೆನ್ಸ್‌ಫೆಳ್ಡ್ ಅವರ ರಾಕ್ಷಸರ ವರ್ಗೀಕರಣ ಪಾಪದ ಜೊತೆ ಹೀಗಿರುತ್ತದೆ:

ನಮೂನೆಗಳು

ಬದಲಾಯಿಸಿ

2009ರಲ್ಲಿ ಜೆಸ್ಯೂಟ್‌ನ ವಿದ್ವಾಂಸರ ಅಧ್ಯಯನದ ಪ್ರಕಾರ ಮನುಷ್ಯರಲ್ಲಿ ಪುರುಷರು ಒಪ್ಪಿಕೊಂಡು ಬಿಡುವ ಅತ್ಯಂತ ಸಾಮಾನ್ಯ ಪ್ರಾಣಾಂತಿಕ ಪಾಪವೆಂದರೆ ಕಾಮ ಮತ್ತು ಹೆಂಗಸರು ಅಹಂಕಾರ.[೧೧] ಈ ವ್ಯತ್ಯಾಸ, ವಿವಿಧ ಹಂತದ ನಿಯೋಜನೆ ಅಥವಾ ಅಧಿಕಾರದಿಂದ ಆಗಿದೆಯೋ ಅಥವಾ ಏನು ಪರಿಗಣನೆಗೆ ಬರುತ್ತದೆ ಎಂಬುದರ ಮೇಲೆ ಅವಲಂಬಿಸಿದೆಯೋ ಅಥವಾ ತಪ್ಪೊಪ್ಪಿಗೆಯನ್ನು ಮಾಡಬೇಕಾಗಿರುವುದರಿಂದ ಮಾಡುವವರ ಧೈರ್ಯದ ಮೇಲೂ ಅವಲಂಬಿಸಿರುವುದರಿಂದ ಈ ವ್ಯತ್ಯಾಸವೋ ಯಾವುದೂ ಸ್ಪಷ್ಟವಾಗಿ ಹೇಳಲಾಗದು.[೧೨]

ಸಾಂಸ್ಕೃತಿಕ ಉಲ್ಲೇಖಗಳು

ಬದಲಾಯಿಸಿ

ಮಧ್ಯಕಾಲೀನ ಯುಗದ ನೀತಿ ಬೋಧಕ ಕಥೆ ಗಳಿಂದ ಹಿಡಿದು ಆಧುನಿಕ ಮಂಗಾ ಸರಣಿ ಕಥೆಗಳು ಮತ್ತು ವೀಡಿಯೋ ಆಟಗಳವರೆಗೂ ಬರಹಗಾರರಿಗೆ ಮತ್ತು ಕಲಾವಿದರಿಗೆ ’ಏಳು ಪ್ರಾಣಾಂತಿಕ ಪಾಪಗಳು’ ಸ್ಫೂರ್ತಿಯ ಮೂಲ ಆಗಿದೆ.

ಎನ್ನೀಯಾಗ್ರಾಮ್ ಸಮಗ್ರೀಕರಣ

ಬದಲಾಯಿಸಿ

ವ್ಯಕ್ತಿತ್ವದ ಎನ್ನೀಯಾಗ್ರಾಮ್ ನಲ್ಲಿ ಏಳು ಪ್ರಾಣಾಂತಿಕ ಪಾಪಗಳ ಜೊತೆ ಸಂಚು ಮತ್ತು ಭಯ ವೂ ಸಮನ್ವಯಗೊಂಡು ಸಮಗ್ರವಾಗುತ್ತದೆ. ಸಾಂಪ್ರದಾಯಿಕ ಕ್ರೈಸ್ತ ವ್ಯಾಖ್ಯಾನಗಳಿಗಿಂತ ಎನ್ನೀಯಾಗ್ರಾಮ್ ವಿವರಣೆಯು ವಿಶಾಲವು ಆಗಿರುತ್ತದೆ ಮತ್ತು ಅವು ಒಂದು ನಿರೂಪಣ ಪಟದಲ್ಲಿ ಗ್ರಹಣವಾಗುವಂತೆ ಇರುತ್ತದೆ.[೧೩][೧೪]

ಏಳು ಪ್ರಾಣಾಂತಿಕ ಪಾಪಗಳಿಂದ ಸ್ಫೂರ್ತಿ ಪಡೆದ ಸಾಹಿತ್ಯ ಕೃತಿಗಳು

ಬದಲಾಯಿಸಿ
  • ದಿ ಲ್ಯಾಡರ್ ಆಫ್ ಡಿವೈನ್ ಅಸೆಂಟ್ ನಲ್ಲಿ ಜಾನ್ ಕ್ಲೈಮಾಕಸ್ (7ನೇ ಶತಮಾನ) ವಿಜಯವನ್ನು, ಮುವತ್ತು ಮೆಟ್ಟಿಲುಗಳ ಏಣಿಯಲ್ಲಿ ಎಂಟನೇ ಸ್ವಾತಂತ್ರ್ಯದ ಆಲೋಚನೆಯಾಗಿ ಇರಿಸಿರುತ್ತಾನೆ : ಕ್ರೋಧ (8), ಒಣಜಂಬ ಅಥವಾ ಬಡಾಯಿ (10, 22), ದು:ಖ (13), ಹೊಟ್ಟೆಬಾಕತನ (14), ಕಾಮ (15), ಅಸೂಯೆ (16, 17), ಅಸೀಡಿಯಾ (18), ಮತ್ತು ಅಹಂಕಾರ (23).
  • ಡಾಂಟೆ (1265–1321) ಕೃತಿ ದಿ ಡಿವೈನ್ ಕಾಮಿಡಿ ಯು "ಇನ್‌ಫರ್ನೋ", "ಪುರ್ಗಾಟೋರಿಯೋ", ಮತ್ತು "ಪ್ಯಾರಾಡಿಸೊ " ಎಂಬ ಮೂರು ಭಾಗಗಳಿಂದ ಕೂಡಿದೆ. "ಇನ್‌ಫರ್ನೊ" ನರಕವನ್ನು ಒಂಬತ್ತು ಸಮಾನಕೇಂದ್ರದ ವೃತ್ತಗಳಿಂದ ಕೂಡಿದೆ ಎನ್ನಲಾಗಿದೆ, ಅವುಗಳಲ್ಲಿ ನಾಲ್ಕು ನೇರವಾಗಿ ಪ್ರಾಣಾಂತಿಕ ಪಾಪಗಳಿಗೆ ಹೊಂದಿಕೆಯಾಗುತ್ತದೆ (ವೃತ್ತ 2 ಕಾಮಕ್ಕೆ, 3 ಹೊಟ್ಟೆಬಾಕತನಕ್ಕೆ, 4 ದುರಾಶೆಗೆ, ಮತ್ತು 5 ಕ್ರೋಧಕ್ಕೆ ಮತ್ತು ಸೋಮಾರಿತನಕ್ಕೆ ಇರಿಸಲಾಗಿದೆ). ಇವೆರಡು ಪಾಪಗಳ ಶಿಕ್ಷೆಯು ಸ್ಟಿಜೀಯನ್ ಕೆರೆಯ ಮೇಲೆ ಮಾಡಲಾಗುತ್ತದೆ, ಕೆರೆಯ ಮೇಲೆ ಕ್ರೋಧದ ಪಾಪಗೈಯ್ದವರಿಗೆ ಶಿಕ್ಷಿಸಿದರೆ ಸೋಮಾರಿಗಳನ್ನು ನೀರಿನಾಳದಲ್ಲಿ ಇನ್ನಿತರ ಸದಸ್ಯರ ಜೊತೆ ಮತ್ತು ವಿಷದ ಹಲ್ಲನ್ನು ಉಳ್ಳ ಹಾವಿನ ಜೊತೆ ಶಿಕ್ಷಿಸಲಾಗುತ್ತದೆ.[೧೫] ಕಾಂಟೊ VII ವಿರ್ಜಿಲ್‌ನಲ್ಲಿ ಹೇಳಿರುವ ಪ್ರಕಾರ ಸೋಮಾರಿಗಳನ್ನು ನೀರಿನಾಳದಲ್ಲಿ ಪರಿಹಾರದ ನಿಟ್ಟುಸಿರಿನ ಗುಳ್ಳೆಗಳನ್ನು ಬಿಡುವಂತೆ ಮಾಡಿ, ಶೋಕಾರ್ತ ಹಾಡುಗಳನ್ನೂ ಹಾಡಿ ಶಿಕ್ಷಿಸಲಾಗುತ್ತದೆ.[೧೬] ಮಿಕ್ಕ ವೃತ್ತಗಳು ಏಳು ಪಾಪಗಳನ್ನು ನಿರ್ದಿಷ್ಟವಾಗಿ ಗುರುತಿಸಿಲ್ಲ. "ಪುರ್ಗಾಟಾರಿಯೋ"ದಲ್ಲಿ, ಮೌಂಟ್ ಪುರ್ಗಾಟರಿಯು ಏಳು ಹಂತದಲ್ಲಿ ಪದರಾಗಿರುತ್ತದೆ ಮತ್ತು ಅಕ್ವಿನಾಸ್ ಪಾಪದ ಪರಿವಿಡಿಯಂತಿರುತ್ತದೆ ಹಾಗೂ ಆ ಪಟ್ಟಿ ’ಅಹಂಕಾರ’ದೊಡನೆ ಪ್ರಾರಂಭವಾಗುತ್ತದೆ. [ಸೂಕ್ತ ಉಲ್ಲೇಖನ ಬೇಕು]
  • ವಿಲ್ಲಿಯಂ ಲ್ಯಾಂಗ್‌ಲ್ಯಾಂಡ್ ನ (c. 1332–1386) ವಿಷನ್ ಆಫ್ ಪೀಯರ್ಸ್ ಪ್ಲೋವ್‌ಮ್ಯಾನ್ ಕನಸುಗಳ ಮಾಲಿಕೆಯ ಸುತ್ತ ಹೆಣೆಯಲಾಗಿದೆ ಮತ್ತು ಇವು ಧರ್ಮ ನಿಷ್ಟೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಮಕಾಲೀನ ತಪ್ಪುಗಳನ್ನು ಹೊಂದಿವೆ ಎಂದು ಟೀಕೆಗಳಿಗೆ ಈಡಾಗಿದೆ. ಪಾಪಗಳು ಈ ಕ್ರಮದಲ್ಲಿ ಪ್ರಸ್ತಾಪಿಸಲಾಗಿದೆ: ಹೆಮ್ಮೆ (ಅಹಂಕಾರ; ಪಾಸಸ್ V, ಲೈನ್ಸ್ 62–71), ಕಾಮ (ಕಾಮುಕತೆ; V. 71–74), ಅಸೂಯೆ (ಅಸೂಯೆ; V. 75–132), ಕ್ರೋಧಿ (ಕ್ರೋಧ; V. 133–185), ಲೋಭ (ಲೋಭತನ; V. 186–306), ಹೊಟ್ಟೆಬಾಕ (ಹೊಟ್ಟೆಬಾಕತನ; V. 307–385), ಸೋಮಾರಿ (ಸೋಮಾರಿತನ; V. 386–453) ( B-ಟೆಕ್ಸ್ಟ್ ಅನ್ನು ಬಳಸಿ).[clarification needed][೧೭]
  • ಜಾನ್ ಗೋವರ್ ನ (1330–1408) ಕಾನ್ಫೆಸ್ಸೋ ಅಮಾಂಟಿಸ್ ಅಮಾನ್ಸ್ ("ದಿ ಲವರ್") ವೀನಸ್ ದೇವತೆಯ ಪಾದ್ರಿ‌ ಜೀನಿಯಸ್‌ಗೆ ಮಾಡುವ ತಪ್ಪೊಪ್ಪಿಗೆಯ ಸುತ್ತ ಕೇಂದ್ರೀಕರಿಸಲಾಗಿದೆ. ಆ ಕಾಲದ ತಪ್ಪೊಪ್ಪಿಗೆಯ ಪದ್ಧತಿಯ ಪ್ರಕಾರ ತಪ್ಪೊಪಿಗೆಯು ಏಳು ಪ್ರಾಣಾಂತಿಕ ಪಾಪಗಳ ಸುತ್ತವೇ ಇದ್ದರೂ ಅವು ಆಸ್ಥಾನದ ಪ್ರೀತಿಯ ನಿಯಮದ ವಿರುದ್ಧ ದೃಷ್ಠಿಯನ್ನು ಕೇಂದ್ರೀಕರಿಸಿದ್ದವು.[೧೮]
  • ಜೀಯೋಫ್ರೀ ಚೌಸರ್ನ (c. 1340–1400) ಕ್ಯಾಂಟರ್‌ಬರಿ ಟೇಲ್ಸ್ ನಲ್ಲಿ ಏಳು ಪ್ರಾಣಾಂತಿಕ ಪಾಪಗಳು ದಿ ಪಾರ್ಸನ್ಸ್ ಟೇಲ್ ನಲ್ಲಿ ಹೀಗಿದೆ : ಅಹಂಕಾರಗಳು (ಪ್ಯಾರಾ 24–29), ಹೊಟ್ಟೆಕಿಚ್ಚು (30–31), ಕ್ರೋಧ(32–54), ಸೋಮಾರಿತನ (55–63), ದುರಾಶೆ (64–70), ಹೊಟ್ಟೆಬಾಕತನ (71–74), ಕಾಮ (75–84).[೧೯]
  • ಕ್ರಿಸ್ಟೋಫರ್ ಮಾರ್ಲೋವ್ ನ (1564–1593) ದಿ ಟ್ರಾಜಿಕ್ ಹಿಸ್ಟರಿ ಆಫ್ ಡಾಕ್ಟರ್ ಫಾಸ್ಟಸ್ ನಲ್ಲಿ ಲ್ಯೂಸಿಫರ್, ಬೀಲ್ಸ್‌ಬಬ್, ಮತ್ತು ಮೆಫಿಸ್ಟೋಫೈಲ್ಸ್ ನರಕದಿಂದ ಬಂದು ಡಾ.ಫಾಸ್ಟಸ್‌ಗೆ "ಭೂತ ಕಾಲ"ವನ್ನು ಕಾಣಿಸಿದಂತೆ ತೋರಿಸಲಾಯಿತು (ಅಭಿನಯ II, ದೃಶ್ಯ 2). ಪಾಪಗಳು ತಮ್ಮಷ್ಟಕ್ಕೇ ತಾವು ಪ್ರಸ್ತುತವಾಗಿದ್ದು ಈ ಕ್ರಮದಲ್ಲಿ : ಅಹಂಕಾರ, ದುರಾಶೆ, ಹೊಟ್ಟೆಕಿಚ್ಚು,ಕ್ರೋಧ, ಹೊಟ್ಟೆಬಾಕತನ, ಸೋಮಾರಿತನ, ಕಾಮ.[೨೦]
  • ಎಡ್ಮಂಡ್ ಸ್ಪೆನ್ಸರ್ ನ (1552–1599), ದಿ ಫೇಯ್ರೀ ಕ್ವೀನೆ "ಬುಕ್ I (ದಿ ಲೆಜೆಂಡ್ ಆಫ್ ದಿ ಕ್ನೈಟ್ ಆಫ್ ದಿ ರೆಡ್ ಕ್ರಾಸ್, ಹೋಲಿನೆಸ್)"ನಲ್ಲಿ ಏಳು ಪ್ರಾಣಾಂತಿಕ ಪಾಪಗಳನ್ನು ಈ ರೀತಿ ಉದ್ದೇಶಿಸುತ್ತದೆ : ಟೊಳ್ಳುತನ/ಅಹಂಕಾರ (ಕ್ಯಾಂಟೋ IV, ಸ್ಟ್ಯಾಂಜಾಗಳು 4–17), ಆಲಸ್ಯ/ಸೋಮಾರಿತನ (IV. 18-20), ಹೊಟ್ಟೆಬಾಕತನ (IV. 21-23), ಕಾಮುಕತನ/ಕಾಮ (IV. 24-26), ಹಣದಾಹ/ದುರಾಶೆ (IV. 27-29), ಹೊಟ್ಟೆಕಿಚ್ಚು (IV. 30-32), ಕ್ರೋಧ (IV. 33-35).[೨೧]
  • ಗಾರ್ಥ್ ನಿಕ್ಸ್ ನ "ದಿ ಕೀಯ್ಸ್ ಟು ದಿ ಕಿಂಗ್ಡಂ" ಅನ್ನುವುದು ಏಳು ಮಕ್ಕಳ ಪುಸ್ತಕಗಳ ಮಾಲಿಕೆ ಇದರಲ್ಲಿ ಒಂದೊಂದು ಮಾಲಿಕೆಯಲ್ಲಿ ಒಂದೊಂದು ಪಾಪದ ವೇದನೆ ಬಗ್ಗೆ ಇರುತ್ತದೆ.
  • ಡೇಲ್ E ಬೇಸಿಯಿ ಯ ಮಾಲಿಕೆಯು Heck: Where the Bad Kids Go ರಿಂದ ಪ್ರಾರಂಭವಾಗುತ್ತದೆ ಮತ್ತು ಅದರಲ್ಲಿ ಒಂದೊಂದು ಪಾಪಕ್ಕೆ ಒಂದೊಂದು ಪುಸ್ತಕವಿದೆ.

ಕಲೆ ಮತ್ತು ಸಂಗೀತ

ಬದಲಾಯಿಸಿ

ಚಲನಚಿತ್ರ, ದೂರದರ್ಶನ, ರೇಡಿಯೋ, ಕಾಮಿಕ್ ಪುಸ್ತಕಗಳು ಮತ್ತು ವೀಡಿಯೋ ಆಟಗಳು

ಬದಲಾಯಿಸಿ

ವಿಜ್ಞಾನ

ಬದಲಾಯಿಸಿ
  • ಕನ್ಸಾಸ್ ಸ್ಟೇಟ್ ಯುನಿವರ್ಸಿಟಿಯ ಭೂಗೋಳದ ಸಹಾಯಕ ಸಂಶೋಧಕ ಥಾಮಸ್ ವೋಟ್ “ದಿ ಸ್ಪೇಷಿಯಲ್ ಡಿಸ್ಟ್ರೀಬ್ಯೂಷನ್ ಆಫ್ ದಿ ಸೆವೆನ್ ಡೆಡ್ಲಿ ಸಿನ್ಸ್ ವಿಥಿನ್ ನೇವಾಡಾ” ಎಂಬ ಅಧ್ಯಯನವೊಂದನ್ನು ಮಂಡಿಸಿದನು. ಇದರ ಜೊತೆಗೆ, ಅಧ್ಯಯನಕ್ಕೆ ದೇಶಾದ್ಯಂತ 3,000 ಪ್ರಾಂತಗಳನ್ನು ಒಳಗೊಂಡಿದೆ ಮತ್ತು U.S.ನಾದ್ಯಂತ ಪರಸ್ಪರ ಪ್ರಭಾವದ ಪಾಪದ ನಕ್ಷೆಗಳ ಹಂಚಿಕೆ ಸೇರಿದೆ.[೨೨]

ಇವನ್ನೂ ಗಮನಿಸಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
ಟಿಪ್ಪಣಿಗಳು
  1. Boyle, Marjorie O'Rourke (1997). "Three: The Flying Serpent". Loyola's Acts: The Rhetoric of the Self. The New Historicism: Studies in Cultural Poetics,. Vol. 36. Berkeley: University of California Press. pp. 100–146. ISBN 978-0-520-20937-4. {{cite book}}: Unknown parameter |origdate= ignored (|orig-year= suggested) (help)
  2. Proverbs 6:16–19
  3. Galatians
  4. ೪.೦ ೪.೧ ರಿಫೌಲೆ, 1967
  5. ಕ್ಯಾಟೆಚಿಸ್ಮ್ ಆಫ್ ದಿ ಕ್ಯಾಥೋಲಿಕ್ ಚರ್ಚ್
  6. ಆಕ್ಸ್‌ಫರ್ಡ್ ಇಂಗ್ಲೀಷ್ ಡಿಕ್ಷನರಿ
  7. ೭.೦ ೭.೧ ಒಕಹೋಲ್ಮ್, ಡೆನ್ನಿಸ್. "Rx ಫಾರ್ ಗ್ಲುಟೋನಿ" Archived 2016-03-24 ವೇಬ್ಯಾಕ್ ಮೆಷಿನ್ ನಲ್ಲಿ.. ಕ್ರಿಶ್ಚೀಯಾನಿಟಿ ಟುಡೇ , Vol. 44, No. 10, ಸೆಪ್ಟೆಂಬರ್ 11, 2000, p.62
  8. "Gluttony". Catholic Encyclopedia.
  9. "Summa Theologica: Treatise on The Theological Virtues (QQ[1] - 46): Question. 36 - OF ENVY (FOUR ARTICLES)". Sacred-texts.com. Retrieved 2010-01-02.
  10. ಆಕ್ಸ್‌ಫರ್ಡ್ ಇಂಗ್ಲೀಷ್ ಡಿಕ್ಷನರಿ
  11. ಟಿ ಸೆಕ್ಸೆಸ್ 'ಸಿನ್ ಇನ್ ಡಿಫರೆಂಟ್ ವೇಯ್ಸ್ys'
  12. ಟ್ರೂ ಕನ್‌ಫೆಷನ್ಸ್: ಮೆನ್ ಆಂಡ್ ವುಮೆನ್ ಸಿನ್ ಡಿಫರೆಂಟ್ಲಿ
  13. ಮೈತ್ರಿ, ದಿ ಎನ್ನೀಯಾಗ್ರಾಮ್ ಆಫ್ ಪ್ಯಾಷನ್ಸ್ ಆಂಡ್ ವಿರ್ಚ್ಯೂಸ್ , pp.11-31
  14. ರೋಹ್ರ್, ದಿ ಎನ್ನೀಯಾಗ್ರಾಮ್
  15. ನೋಡಿ ಇನ್‌ಫರ್ನೋ, ಕ್ಯಾಂಟೊ VII
  16. ಇನ್‌ಫರ್ನೋ, ಕ್ಯಾಂಟೊ VII.120-128, H.F. ಕ್ಯಾರಿಯಿಂದ ಭಾಷಾಂತರಿಸಲಾಗಿದೆ, ಕರ್ಟಸಿ ಪ್ರಾಜೆಕ್ಟ್ ಗುಟೇನ್‌ಬರ್ಗ್
  17. http://www.hti.umich.edu/cgi/c/cme/cme-idx?type=HTML&rgn=TEI.2&byte=21030211[ಶಾಶ್ವತವಾಗಿ ಮಡಿದ ಕೊಂಡಿ]
  18. "Confessio Amantis, or, Tales of the Seven Deadly Sins by John Gower - Project Gutenberg". Gutenberg.org. 2008-07-03. Retrieved 2010-01-02.
  19. "The Canterbury Tales/The Parson's Prologue and Tale - Wikisource". En.wikisource.org. 2008-11-01. Retrieved 2010-01-02.
  20. "Christopher Marlowe, The Tragedie of Doctor Faustus (B text) (ed. Hilary Binda)". Perseus.tufts.edu. Retrieved 2010-01-02.
  21. http://darkwing.uoregon.edu/~rbear/queene1.html
  22. By dukeofurl. "One nation, seven sins - Thursday, March 26, 2009 | 2 a.m." Las Vegas Sun. Retrieved 2010-01-02.
ಗ್ರಂಥಸೂಚಿ
  • ರಿಫೌಲ್, F. (1967) ಇವಾಗ್ರೀಯಸ್ ಪಾಂಟೀಕಸ್. ಅಮೇರಿಕಾದ ಕ್ಯಾಥೋಲಿಕ್ ಯುನಿವರ್ಸಿಟಿಯ ಸಿಬ್ಬಂದಿ (Eds.) ನವ ಕ್ಯಾಥೋಲಿಕ್ ವಿಶ್ವಕೋಶ. ಸಂಪುಟ 5, pp644–645. ನ್ಯೂ ಯಾರ್ಕ್: ಮ್ಯಾಕ್‌ಗ್ರಾವ್‌ಹಿಲ್.
  • ಸ್ಕೂಮೇಕರ್, ಮೇಯ್ನೋಲ್ಫ್ (2005): "ರಾಕ್ಷಸರ ಅನುಕ್ರಮಣಿಕೆಯು ಮಧ್ಯಕಾಲೀನ ಜರ್ಮನ್ ಸಾಹಿತ್ಯದಲ್ಲಿನ ಅವಗುಣಗಳ ಅನುಕ್ರಮಣಿಕೆ : 'ಡೆಸ್ ಟೀಫಲ್ಸ್ ನೆಟ್ಸ್' ಮತ್ತು ಅಲ್ರಿಚ್ ವಾನ್ ಎಟ್ಸೆನ್ ಬ್ಯಾಕ್‌ನ ಅಲೆಕ್ಸಾಂಡರ್ ರೊಮಾನ್ಸ್." ಇನ್ ದಿ ಗಾರ್ಡನ್ ಆಫ್ ಇವಿಲ್: ಮಧ್ಯಕಾಲೀನ ಯುಗದಲ್ಲಿ ಸಂಸ್ಕೃತಿ ಮತ್ತು ಸದ್ಗುಣಗಳು . ರಿಚರ್ಡ್ ನ್ಯೂಹಾಸರ್‌ನಿಂದ ಸಂಪಾದಿತವಾಗಿದೆ, pp. 277–290. ಟೊರಾಂಟೋ: ಪಾಂಟಿಫಿಕಲ್ ಇನ್ಸ್ ಟಿಟ್ಯೂಟ್ ಆಫ್ ಮೆಡೀವಲ್ ಸ್ಟಡೀಸ್.

ಹೆಚ್ಚಿನ ಮಾಹಿತಿಗಾಗಿ

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ